ಮನೆಗೆ ನುಗ್ಗಿ ವ್ಯಕ್ತಿಗೆ ಕೊಲೆ ಬೆದರಿಕೆ: ಇನ್ನೋರ್ವ ಆರೋಪಿ ಬಂಧನ

ಉಪ್ಪಳ: ಮನೆಗೆ ಅತಿಕ್ರಮಿಸಿ ನುಗ್ಗಿ ವ್ಯಕ್ತಿಗೆ ಕೊಲೆ ಬೆದರಿಕೆಯೊಡ್ಡಿದ ಪ್ರಕರಣದಲ್ಲಿ ಇನ್ನೋರ್ವ ಆರೋ ಪಿಯನ್ನು ಮಂಜೇಶ್ವರ ಪೊಲೀಸರು ಸೆರೆಹಿಡಿದಿದ್ದಾರೆ.

ಮೂಡಂಬೈಲು ಬೆಜ್ಜ ನಿವಾಸಿ ನಿಸಾರ್ (26) ಎಂಬಾತ ಬಂಧಿತ ಆರೋಪಿಯಾಗಿದ್ದಾನೆ.  ಕಳೆದ ಜುಲೈ 2ರಂದು ಬೆಳಿಗ್ಗೆ ಬೇರಿಕೆ ನಿವಾಸಿ ಅಬೂಬಕರ್ ಸಿದ್ದಿಕ್‌ರ ಮನೆಗೆ  ನುಗ್ಗಿದ ತಂಡ ತಲವಾರು ಬೀಸಿ ಕೊಲೆಬೆದರಿಕೆ ಯೊಡ್ಡಿತೆಂದು ಆರೋಪಿಸಲಾಗಿದೆ. ಇದರಂತೆ ನಿಸಾರ್ ಸಹಿತ ನಾಲ್ಕು ಮಂದಿ ವಿರುದ್ಧ ಮಂಜೇಶ್ವರ ಪೊಲೀಸರು ಕೊಲೆಯತ್ನ ಕೇಸು ದಾಖಲಿಸಿಕೊಂ ಡಿದ್ದರು. ಈ ಪ್ರಕರಣದಲ್ಲಿ ಮೊರತ್ತಣೆ ಕಜೆಕೋಡಿಯ ಮೊಹಮ್ಮದ್ ಅಸ್ಕರ್ ಹಾಗೂ ಮೊರತ್ತಣೆ ಬಟ್ಯಪದವಿನ ಮೊಹಮ್ಮದ್ ಹುಸೈನ್ ಎಂಬಿವರನ್ನು ಪೊಲೀಸರು ಈ ಹಿಂದೆ ಸೆರೆಹಿಡಿದಿದ್ದರು. ಇದೇ ವೇಳೆ ನಿಸಾರ್ ಕರ್ನಾಟಕಕ್ಕೆ ಪರಾರಿಯಾಗಿ ತಲೆಮರೆಸಿಕೊಂಡಿದ್ದನು. ಈತ ನಿನ್ನೆ ಊರಿಗೆ ಆಗಮಿಸಿದ ಮಾಹಿತಿ ಪೊಲೀಸರಿಗೆ ಲಭಿಸಿತ್ತು. ಇದರಂತೆ ಎಸ್.ಐ ನಿಖಿಲ್ ನೇತೃತ್ವದ ಪೊಲೀಸರು ಕಾರ್ಯಾಚರಣೆ ನಡೆಸಿ ಸೆರೆಹಿಡಿದಿದ್ದಾರೆ.

ಇದೇ ವೇಳೆ ಈ ಕೊಲೆ ಬೆದರಿಕೆ ಪ್ರಯತ್ನದಲ್ಲಿ ಇನ್ನೋರ್ವ ಆರೋಪಿಗಾಗಿ ಶೋಧ ನಡೆಸುತ್ತಿರು ವುದಾಗಿ ಪೊಲೀಸರು ತಿಳಿಸಿದ್ದಾರೆ. ನಿನ್ನೆ ಸೆರೆಗೀಡಾದ ಆರೋಪಿ ನಿಸಾರ್‌ನನ್ನು ನ್ಯಾಯಾಲಯದಲ್ಲಿ ಹಾಜರುಪಡಿಸಿದ್ದು ಈ ವೇಳೆ ರಿಮಾಂಡ್ ವಿಧಿಸಲಾಗಿದೆ.

RELATED NEWS

You cannot copy contents of this page