ಮಸೀದಿಯ ಉಸ್ತಾದ್ ಕೊಠಡಿಯಿಂದ 35,000 ರೂ. ಕಳವು

ಕಾಸರಗೋಡು: ಮಸೀದಿಯ ಉಸ್ತಾದ್‌ರ ಕೊಠಡಿಗೆ ಕಳ್ಳರು ನುಗ್ಗಿ 35,000 ರೂ. ಕಳವುಗೈದ ಘಟನೆ ನಡೆದಿದೆ. ಚೆರ್ವತ್ತೂರು ತುರ್ತಿ ಜಮಾಯತ್ ಮಸೀದಿಯ ಉಸ್ತಾದ್ ಅಲಿ ಅಕ್ಭರ್‌ರ ಕೊಠಡಿಯಲ್ಲಿ ಈ ಕಳವು ನಡೆದಿದೆ.  ಕೊಠಡಿಯ ಸೀಲಿಂಗ್ ಒಡೆದು ಒಳನುಗ್ಗಿದ ಕಳ್ಳರು   ಮೇಜಿನ ಡ್ರವರ್‌ನೊಳಗೆ ಇರಿಸಲಾಗಿದ್ದ ಹಣ ಕಳವುಗೈದಿದ್ದಾರೆ. ನಿನ್ನೆ ಮುಂಜಾನೆ ಕಳವು ನಡೆದಿದೆ. ಕಳವು  ನಡೆಯುವ ವೇಳೆ ಉಸ್ತಾದ್ ನಮಾಜ್‌ಗೆ ಹೋಗಿದ್ದರು. ಅಲ್ಲಿಂದ ಅವರು ಹಿಂತಿರುಗಿದಾಗಲಷ್ಟೇ ಕಳವು ನಡೆದ ವಿಷಯ ಅವರ ಗಮನಕ್ಕೆ  ಬಂದಿದೆ.ಈಬಗ್ಗೆ ನೀಡಲಾದ ದೂರಿನಂತೆ ಚಂದೇರ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ಆರಂಭಿಸಿದ್ದಾರೆ.

You cannot copy contents of this page