ಮಾಜಿ ಶಾಸಕ ಪಿ.ಜೆ. ಫ್ರಾನ್ಸಿಸ್ ನಿಧನ


ಆಲಪ್ಪುಳ: ಕಾಂಗ್ರೆಸ್ ಮುಖಂ ಡ, ಮಾಜಿ ಶಾಸಕ ಪಿ.ಜೆ. ಫ್ರಾನ್ಸಿಸ್ (88) ನಿಧನ ಹೊಂದಿದರು. 1996ರ ವಿಧಾನಸಭಾ ಚುನಾವಣೆ ಯಲ್ಲಿ ಮಾರಾರಿಕುಳಂ ಕ್ಷೇತ್ರದಲ್ಲಿ ವಿ.ಎಸ್. ಅಚ್ಯುತಾನಂದನ್ರನ್ನು ಸೋಲಿಸಿ ಗಮನ ಸೆಳೆದಿದ್ದರು. 1987, 91ರಲ್ಲಿ ಅರೂರು ವಿಧಾನ ಸಭಾ ಕ್ಷೇತ್ರದಿಂದ ಯುಡಿಎಫ್ ಅಭ್ಯರ್ಥಿಯಾಗಿದ್ದ ಕೆ.ಆರ್. ಗೌರಿಅಮ್ಮರ ವಿರುದ್ಧ ಸ್ಪರ್ಧಿಸಿದ್ದರು. ಅದರ ಬಳಿಕ ಮಾರಾರಿಕುಳಂನಲ್ಲಿ ಕೇರಳದ ಗಮನ ಸೆಳೆದ ಸ್ಪರ್ಧೆ ಯಲ್ಲಿ ಅವರು ವಿ.ಎಸ್. ಅಚ್ಯುತಾ ನಂದನ್ರನ್ನು ಸೋಲಿಸಿ ಜಯ ಗಳಿಸಿದ್ದರು. ಆ ಬಳಿಕ 2001ರಲ್ಲಿ ಇದೇ ಕ್ಷೇತ್ರದಿಂದ ಸ್ಪರ್ಧಿಸಿದರಾ ದರೂ ಟಿ.ಎಂ. ಥೋಮಸ್ ಐಸಾಕ್ ಇವರನ್ನು ಸೋಲಿಸಿದರು. ಆಲಪ್ಪುಳ ಡಿಸಿಸಿ ಉಪಾಧ್ಯಕ್ಷರಾಗಿದ್ದರು.

RELATED NEWS

You cannot copy contents of this page