ಮುಖ್ಯಮಂತ್ರಿಯ ಚರ್ಚೆಗೆ ಆಹ್ವಾನಿಸದ ಬಗ್ಗೆ ಬಸ್ ಮಾಲಕರ ಖಂಡನೆ

ಕಾಸರಗೋಡು: ನವಕೇರಳ ಸಭೆಗಾಗಿ ಜಿಲ್ಲೆಗೆ ತಲುಪಿದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅತಿಥಿ ಮಂದಿರದಲ್ಲಿ ನಡೆಸಿದ ಸಭೆಗೆ ಬಸ್ ಮಾಲಕರ ಸಂಘಟನೆಯನ್ನು ಆಹ್ವಾನಿಸದಿರುವುದು ಖಂಡನೀಯವೆಂದು ಜಿಲ್ಲಾ ಪ್ರೈವೇಟ್ ಬಸ್ ಆಪರೇಟರ್ಸ್ ಫೆಡರೇಶನ್ ತಿಳಿಸಿದೆ. ಜಿಲ್ಲೆಯ ಅಭಿವೃದ್ಧಿಗಾಗಿ ಉದ್ಯಮಿಗಳು, ಸಂಘಸಂಸ್ಥೆಗಳ ಪ್ರತಿನಿಧಿಗಳು, ವ್ಯಾಪಾರಿ ವ್ಯವಸಾಯಿ ಪ್ರತಿನಿಧಿಗಳ ಸಹಿತ ಹೆಚ್ಚಿನವರನ್ನು ಚರ್ಚೆಗೆ ಆಹ್ವಾನಿಸಿದ್ದರೂ ಜಿಲ್ಲಾಡಳಿತ ಬಸ್ ಮಾಲಕರ ಸಂಘವನ್ನು ಆಹ್ವಾನಿಸದಿರುವುದು ಪ್ರತಿಭಟನಾರ್ಹವೆಂದು ಸಂಘಟನೆ ಹೇಳಿಕೆಯಲ್ಲಿ ತಿಳಿಸಿದೆ.

You cannot copy contents of this page