ಮೂಕ ವ್ಯಕ್ತಿ ನಾಪತ್ತೆ
ಕಾಸರಗೋಡು: ಮನೆಯಿಂದ ಹೊರಕ್ಕೆ ಹೋದ ಮೂಕನಾಗಿರುವ ವ್ಯಕ್ತಿ ನಾಪತ್ತೆಯಾದ ಬಗ್ಗೆ ವಿದ್ಯಾನಗರ ಪೊಲೀಸರಿಗೆ ದೂರು ನೀಡಲಾಗಿದೆ. ತೆಕ್ಕಿಲ್ ತೆಕ್ಕೆಮೂಲೆ ನಿವಾಸಿ ರಾಮನ್ (54) ನಾಪತ್ತೆಯಾದ ವ್ಯಕ್ತಿ. ಇವರು ಮಾತನಾಡಲು ಸಾಧ್ಯವಾಗದ ವ್ಯಕ್ತಿಯಾಗಿದ್ದಾರೆ. ಜೂನ್ ೨೬ರಂದು ಮನೆಯಿಂದ ಹೊರಹೋದ ಅವರು ಬಳಿಕ ಹಿಂತಿರುಗಿಲ್ಲವೆಂದು ಸಹೋದರ ಈಶ್ವರ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಇವರು ಪತ್ತೆಯಾದಲ್ಲಿ 9497970103 ಎಂಬ ನಂಬ್ರಕ್ಕೆ ತಿಳಿಸುವಂತೆ ಪೊಲೀಸರು ವಿನಂತಿಸಿದ್ದಾರೆ.