ಮೂವರು ಮಕ್ಕಳು, ಪತ್ನಿಯನ್ನು ಕೊಲೆಗೈದ ಬಳಿಕ ಆತ್ಮಹತ್ಯೆಗೈದ  ಯಜಮಾನ

ಕೋಟ್ಟಯಂ: ಮೂವರು ಮಕ್ಕಳು ಮತ್ತು ಪತ್ನಿಯನ್ನು ಕೊಲೆಗೈದ ಬಳಿಕ ಮನೆ ಯಜಮಾನ ಆತ್ಮಹತ್ಯೆಗೈದ ಘಟನೆ ಪಾಲಾದಲ್ಲಿ ನಡೆದಿದೆ. ಪಾಲಾ ಪೂವರಣಿ ಕೊಚ್ಚುಕೊಟ್ಟಾರಂನ ಬಾಡಿಗೆ ಮನೆಯಲ್ಲಿ ವಾಸಿಸುವ  ಮೂಲತಃ ಅಗಲಕುನಂ ಞಂಡು ಪಾರ ನಿವಾಸಿ ಕುದಲಿಪರಂಬಿಲ್ ಜೈಸನ್ ಥೋಮಸ್ (೪೪), ಪತ್ನಿ ಮೇರಿನಾ (೨೯), ಮಕ್ಕಳಾದ ಜೆರಾಲ್ಡ್ (೪), ಜೆರಿ (೨) ಮತ್ತು ಜೆರಿನ್ (೭ ತಿಂಗಳು) ಎಂಬವರು ಸಾವನ್ನಪ್ಪಿದವರು  ಪತ್ನಿ ಮತ್ತು ಮಕ್ಕಳನ್ನು ಇರಿದು ಕೊಲೆಗೈದ ಬಳಿಕ ಜೈಸನ್  ಅದೇ ಮನೆಯಲ್ಲಿ ನೇಣುಬಿಗಿ ದು ಆತ್ಮಹತ್ಯೆಗೈದಿರುವುದಾಗಿ ಪ್ರಾಥಮಿಕ ವರದಿಯಲ್ಲಿ ಸ್ಪಷ್ಟಗೊಂಡಿದೆ. 

RELATED NEWS

You cannot copy contents of this page