ಮೇಲ್ಸೇತುವೆಯಲ್ಲಿ ಬೈಕ್‌ಗೆ ಕಾರು ಢಿಕ್ಕಿ : ತಂದೆ ಮೃತ್ಯು; ಮಗ ಗಂಭೀರ

ಕಾಸರಗೋಡು: ನೀಲೇಶ್ವರ ರೈಲ್ವೇ ಮೇಲ್ಸೇತುವೆಯಲ್ಲಿ ಬೈಕ್‌ನ ಹಿಂದುಗಡೆ ಕಾರೊಂದು ಢಿಕ್ಕಿ ಹೊಡೆದು ಬೈಕ್‌ನಲ್ಲಿ ಸಂಚರಿಸುತ್ತಿದ್ದ  ವ್ಯಕ್ತಿ ಸಾವನ್ನಪ್ಪಿ, ಅವರ ಪುತ್ರ ಗಂಭೀರ ಗಾಯಗೊಂಡ ಘಟನೆ ನಡೆದಿದೆ. ತಳಿಪರಂಬ ಸರ್ ಸೈಯದ್ ಕಾಲೇಜಿನ ಬಸ್ ಚಾಲಕ ಇರಿಕ್ಕೂರು ನಿಲಾಂಮುಟ್ಟಂ ಎ.ಪಿ. ಹೌಸ್‌ನ ಕೆ.ವಿ. ಹುಸ್ಸನ್ ಕುಟ್ಟಿ (59) ಅಪಘಾತದಲ್ಲಿ ಸಾವನ್ನಪ್ಪಿದ್ದು, ಪುತ್ರ ಫೈಸಲ್ (29) ಗಂಭೀರ ಗಾಯಗೊಂಡಿದ್ದು, ಅವರನ್ನು ಕಣ್ಣೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಇವರಿಬ್ಬರು ಮಂಗಳೂರಿನಲ್ಲಿರುವ ಸಂಬಂಧಿಕರ ಮನೆಗೆ ಹೋಗಿ ರಾತ್ರಿ ಮನೆಗೆ ಹಿಂತಿರುಗುತ್ತಿದ್ದ ದಾರಿ ಮಧ್ಯೆ ಈ ಅಪಘಾತ ಸಂಭವಿಸಿದೆ. ಗಂಭೀರ ಗಾಯಗೊಂಡ ಇವರಿಬ್ಬರನ್ನು ಮೊದಲು ನೀಲೇಶ್ವರದ ಖಾಸಗಿ ಆಸ್ಪತ್ರೆಗೆ ಸಾಗಿಸಿ ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಕಣ್ಣೂರಿಗೆ ಸಾಗಿಸುವ ದಾರಿ ಮಧ್ಯೆ ಹುಸ್ಸನ್ ಕುಟ್ಟಿ ನಿಧನಹೊಂದಿದರು.  ಬೈಕ್‌ಗೆ ಢಿಕ್ಕಿ ಹೊಡೆದ ಕಾರನ್ನು   ಬಳಿಕ ಗ್ಯಾರೇಜ್‌ವೊಂದರಿಂದ ನೀಲೇಶ್ವರ ಪೊಲೀಸರು  ಪತ್ತೆಹಚ್ಚಿದ್ದಾರೆ.  ಆ ಕಾರು ಚಲಾಯಿಸುತ್ತಿದ್ದ ರಿಷಿಕೇಶ್ (23) ಎಂಬಾತನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಅಪಘಾತದಲ್ಲಿ ಸಾವನ್ನಪ್ಪಿದ ಹುಸೈನ್ ಕುಟ್ಟಿ  ಪತ್ನಿ ಎ.ವಿ. ಸೈಬುನ್ನೀಸ, ಮಕ್ಕಳಾದ ಫಸೀಲಾ, ಫಸಲುನ್ನೀಸಾ, ಫಬ್ನೀಸಾ, ಸಹೋದರ-ಸಹೋದರಿ ಯರಾದ ಹಾರೀಸ್, ಸಾಬೀತ್, ಆಯಿಷಾ, ಖದೀಜಾ, ರಹಮ್ಮತ್, ಸುಬೈದಾ, ಸೆರಿನಾ, ರಾಬಿ, ಮರಿಯಾಂ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

RELATED NEWS

You cannot copy contents of this page