ಯುಡಿಎಫ್‌ನ ಸೀಟು ಹಂಚಿಕೆ ಮುಸ್ಲಿಂ ಲೀಗ್‌ಗೆ ಮೂರನೇ ಸೀಟಿಲ್ಲ

ತಿರುವನಂತಪುರ: ಲೋಕಸಭಾ ಚುನಾವಣೆಗೆ ಸಂಬಂಧಿಸಿ ಯುಡಿಎಫ್‌ನಲ್ಲಿ ಸೀಟು ಹಂಚಿಕೆ ವಿಷಯದಲ್ಲಿ ತಲೆಯೆತ್ತಿದ್ದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗಿದೆಯೆಂದು ವಿರೋಧಪಕ್ಷ ನಾಯಕ ವಿ.ಡಿ. ಸತೀಶನ್ ತಿಳಿಸಿದ್ದಾರೆ.

ಮುಸ್ಲಿಂ ಲೀಗ್‌ಗೆ ಮೂರನೇ ಸೀಟು ನೀಡುವ ವಿಷಯದಲ್ಲಿ ಉಂಟಾಗಬಹುದಾದ ಪ್ರಾಯೋಗಿಕ ಸಮಸ್ಯೆಯನ್ನು ನಾವು ಮುಸ್ಲಿಂ ಲೀಗ್‌ಗೆ ಈಗಾಗಲೇ ಮನವರಿಕೆ ಮಾಡಿದ್ದೇವೆ. ಅದಕ್ಕೆ ಮುಸ್ಲಿಂ ಲೀಗ್ ಒಪ್ಪಿಗೆ ನೀಡಿದೆ. ಅದರಂತೆ ಮುಸ್ಲಿಂ ಲೀಗ್ ತನ್ನ ಈಗಿರುವ  ಎರಡು ಕ್ಷೇತ್ರದಲ್ಲಿ ಮಾತ್ರವೇ ಸ್ಪರ್ಧಿಸಲಿದೆ.

RELATED NEWS

You cannot copy contents of this page