ಯುವಕ ಮನೆಯೊಳಗೆ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು: ಯುವಕ ಮನೆಯ ಬೆಡ್‌ರೂಂನಲ್ಲಿ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತೆಯಾಗಿ ದ್ದಾರೆ. ಕೊರಕ್ಕೋಡು ಕ್ಷೇತ್ರ ಸಮೀಪದ ಮನಮೋಹನ್-ಶಾರದ ದಂಪತಿ ಪುತ್ರ ದೇವರಾಜ್ (೪೬) ಮೃತಪಟ್ಟ ಯುವಕನಾಗಿದ್ದಾರೆ. ನಿನ್ನೆ ರಾತ್ರಿ ಮಲಗಿದ್ದ ಇವರು ಇಂದು ಬೆಳಿಗ್ಗೆ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಘಟನೆ ಬಗ್ಗೆ ನಗರ ಠಾಣೆ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತದೇಹವನ್ನು ಜನರಲ್ ಆಸ್ಪತ್ರೆಯ  ಶವಾಗಾರಕ್ಕೆ ತಲುಪಿಸಲಾಗಿದೆ.

ಮೃತರು ಪತ್ನಿ ಲೇಖನ, ಏಕಪುತ್ರ ತನುಷ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

RELATED NEWS

You cannot copy contents of this page