ರಾಜೀನಾಮೆ ಪತ್ರ ಹಿಂತೆಗೆದುಕೊಂಡಿರುವುದಾಗಿ ಸಿಯಾಸುನ್ನೀಸ ಹೇಳಿಕೆ: ಪೈವಳಿಕೆ ಪಂಚಾಯತ್ ಮುಸ್ಲಿಂ ಲೀಗ್

ಸದಸ್ಯೆಯ ರಾಜೀನಾಮೆ ಕಾನೂನು ಕುಣಿಕೆಯಲ್ಲಿ

ಕುಂಬಳೆ: ಪೈವಳಿಕೆ ಗ್ರಾಮ ಪಂಚಾಯತ್‌ನ ೨ನೇ ವಾರ್ಡ್ ಸದಸ್ಯೆ ಮುಸ್ಲಿಂ ಲೀಗ್‌ನ ಸಿಯಾಸುನ್ನೀಸರ ರಾಜೀನಾಮೆ ಕಾನೂನು ಕುಣಿಕೆಯಲ್ಲಿ ಸಿಲುಕಿದೆ. ತನ್ನ ರಾಜೀನಾಮೆ ಪತ್ರವನ್ನು ರಿಜಿಸ್ಟರ್ಡ್ ಅಂಚೆ ಮೂಲಕ ಕಳುಹಿಸಿದ ಬೆನ್ನಲ್ಲೇ ರಾಜೀನಾಮೆ ಹಿಂತೆಗೆದುಕೊಳ್ಳುವುದಾಗಿ ತಿಳಿಸಿ ಸಿಯಾಸುನ್ನೀಸ ಪಂಚಾಯತ್ ಸೆಕ್ರೆಟರಿಗೆ ಪತ್ರ ನೀಡಿರುವುದರ ಬೆನ್ನಲ್ಲೇ ಈ ವಿದ್ಯಾಮಾನ ನಡೆದಿದೆ.

ಮೊನ್ನೆ ಸಿಯಾಸುನ್ನೀಸ ತನ್ನ ರಾಜೀನಾಮೆ ಪತ್ರವನ್ನು ರಿಜಿಸ್ಟರ್ಸ್ ಅಂಚೆ ಮೂಲಕ ಪಂಚಾಯತ್ ಸೆಕ್ರೆಟರಿಗೆ ಕಳುಹಿಸಿದ್ದಾರೆ. ಪಕ್ಷದ ನಾಯಕತ್ವಕ್ಕೆ ಕೂಡಾ ತಿಳಿಸದೆ ಇವರು ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ಈ ಘಟನೆ ಪಕ್ಷದೊಳಗೆ ಭಾರೀ ವಿವಾದಗಳಿಗೆ ಎಡೆಯಾಗುವುದರೊಂದಿಗೆ ರಾಜೀನಾಮೆ ಹಿಂತೆಗೆದುಕೊಳ್ಳುವುದಾಗಿ ತಿಳಿಸಿ ಪಂಚಾಯತ್ ಸೆಕ್ರೆಟರಿ ಜಗದೀಶರಿಗೆ ಪತ್ರ ನೀಡಿದ್ದಾರೆ. ರಿಜಿಸ್ಟರ್ಡ್ ಅಂಚೆ ಮೂಲಕ ಕಳುಹಿಸಿದ ರಾಜೀನಾಮೆ ಪತ್ರ ಪಂಚಾಯತ್ ಸೆಕ್ರೆಟರಿ ಎಂಬ ನೆಲೆಯಲ್ಲಿ ಸ್ವೀಕರಿಸುವಂತೆ  ಕಾನೂನಿನಲ್ಲಿ ತಿಳಿಸಲಾಗಿದೆ ಎಂದು ಜಗದೀಶ ತಿಳಿಸಿದ್ದಾರೆ. ಅದಲ್ಲದಿದ್ದರೆ ಚುನಾವಣಾ ಆಯೋಗವನ್ನು ಸಮೀಪಿಸುವಂತೆ ಕಾಯ್ದೆಯಲ್ಲಿರುವುದಾಗಿಯೂ ಅವರು ಸ್ಪಷ್ಟಪಡಿಸಿದ್ದಾರೆ. ಪೈವಳಿಕೆ ಗ್ರಾಮ ಪಂಚಾಯತ್‌ನಲ್ಲಿ ೧೯ ಮಂದಿ ಸದಸ್ಯರಿದ್ದಾರೆ. ಈ ಪೈಕಿ ಎಲ್‌ಡಿಎಫ್‌ಗೆ ೮ ಸೀಟುಗಳಿವೆ. ಇದರಲ್ಲಿ ಸಿಪಿಎಂಗೆ ೬, ಸಿಪಿಎಂ  ಸ್ವತಂತ್ರ ಓರ್ವ ಹಾಗೂ ಸಿಪಿಐಗೆ ಓರ್ವ ಸದಸ್ಯರಿದ್ದಾರೆ. ಬಿಜೆಪಿಗೆ ೮, ಮುಸ್ಲಿಂ ಲೀಗ್‌ಗೆ ೨, ಕಾಂಗ್ರೆಸ್‌ಗೆ ಓರ್ವ ಸದಸ್ಯರಿದ್ದರು. ಸಿಯಾಸುನ್ನೀಸರ ರಾಜೀನಾಮೆಯೊಂದಿಗೆ  ಲೀಗ್‌ನ ಸದಸ್ಯತ್ವ ಒಂದಕ್ಕಿಳಿದಿದೆ. ಚೀಟಿ ಎತ್ತುವ ಮೂಲಕ  ಸಿಪಿಎಂ ಸದಸ್ಯ ಪಂಚಾಯತ್ ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದರು.

You cannot copy contents of this page