ರಾಜ್ಯ ಸರಕಾರದ ಕೇರಳೀಯಂ ಡಿಸೆಂಬರ್‌ನಲ್ಲಿ

ತಿರುವನಂತಪುರ: ಈ ವರ್ಷವೂ ಕೇರಳೀಯಂ ಕಾರ್ಯಕ್ರಮ ನಡೆಸಲು ಸರಕಾರ ಮುಂದಾಗಿದೆ. ಈ ವರ್ಷ ಡಿಸೆಂಬರ್‌ನಲ್ಲಿ ಕೇರಳೀಯಂ ನಡೆಯಲಿದೆ ಎಂದು ತಿಳಿದು ಬಂದಿದೆ. ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ಈ ಕಾರ್ಯಕ್ರಮ ನಡೆದಿತ್ತು. ಕಾರ್ಯಕ್ರಮದ ಕುರಿತು ಚರ್ಚೆ ನಡೆಸಲು ಮುಖ್ಯಮಂತ್ರಿ ಅಧ್ಯಕ್ಷತೆ ಯಲ್ಲಿ ಸಂಘಟಕ ಸಮಿತಿ ಸಭೆ ನಡೆಸಲಾಯಿತು. ಕಾರ್ಯಕ್ರಮಕ್ಕೆ ಬೇಕಾದ ಖರ್ಚಿಗೆ  ಪ್ರಾಯೋಜ ಕತ್ವದಲ್ಲಿ ಹಣ ಸಂಗ್ರಹಿಸಲು ಇಲಾಖೆಗಳಿಗೆ ನಿರ್ದೇಶ ನೀಡಲಾಗಿದೆ. ಇದೇ ವೇಳೆ ಕಳೆದ ವರ್ಷದ ಕೇರ ಳೀಯಂ ಕಾರ್ಯಕ್ರಮದ ಪ್ರಾಯೋಜ ಕತ್ವದ ಲೆಕ್ಕಗಳನ್ನು ಸರಕಾರ ಇದುವರೆಗೆ ಬಹಿರಂಗಪಡಿಸಿಲ್ಲವೆನ್ನಲಾಗಿದೆ

You cannot copy contents of this page