ರಾತ್ರಿ ಮರೆಯಲ್ಲಿ ಏಕಕಾಲದಲ್ಲಿ ಮೂರು ರೈಲುಗಳಿಗೆ ಕಲ್ಲು ತೂರಾಟ: ಮೂವರ ವಶ

ಕಾಸರಗೋಡು: ರೈಲುಗಳ ಮೇಲೆ ಸಮಾಜ ದ್ರೋಹಿಗಳು ಕಲ್ಲೆಸೆದು ಹಾನಿಗೊಳಿಸುವ ದುಷ್ಕೃತ್ಯಗಳು ಎಗ್ಗಿಲ್ಲದೆ ಇನ್ನೂ ಮುಂದುವರಿಯುತ್ತಿದೆ.

ನಿನ್ನೆ ಮಾತ್ರವಾಗಿ ರಾತ್ರಿ ಮರೆಯಲ್ಲಿ ಒಂದೇ ಸಮಯದಲ್ಲಿ ಪುಂಡರು ಮೂರು ರೈಲುಗಳಿಗೆ ಕಲ್ಲು ತೂರಾಟ ನಡೆಸಿ ಹಾನಿಗೊಳಿಸಿದ್ದಾರೆ.  ಇದಕ್ಕೆ ಸಂಬಂಧಿಸಿ  ಆರ್‌ಪಿಎಫ್ ಕಣ್ಣೂರಿನಿಂದ ಮೂವ ರನ್ನು ಸೆರೆಹಿಡಿದು ತೀವ್ರ ವಿಚಾರಣೆಗೊಳ ಪಡಿಸುತ್ತಿದೆ. ಮಂಗಳೂರಿನಿಂದ ಚೆನ್ನೈಗೆ ಹೋಗುತ್ತಿದ್ದ ಚೆನ್ನೈ ಸುಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲುಗಾಡಿಯ ಹವಾನಿ ಯಂತ್ರಿತ ಬೋಗಿಗಳಿಗೆ ಕಲ್ಲೆಸೆತದಿಂದ ಕಿಟಿಕಿ ಗಾಜುಗಳು ಪುಡಿಗೈಯ್ಯಲ್ಪಟ್ಟಿದೆ. ಕಣ್ಣೂರು-ವಳಪಟ್ಟಣಂ ಮಧ್ಯೆ ಕಲ್ಲೆಸೆತ ನಡೆದಿದೆ. ಓಘಾ-ಎರ್ನಾಕುಳಂ ಎಕ್ಸ್‌ಪ್ರೆಸ್ ರೈಲಿಗೆ ನೀಲೇಶ್ವರದ ಬಳಿ ಕಲ್ಲು ತೂರಾಟ ನಡೆಸಲಾಗಿದೆ. ಕಲ್ಲು ರೈಲಿನ ಜನರಲ್ ಬೋಗಿಯ ಗಾಜಿಗೆ ತಗಲಿ ಹಾನಿಗೊಂಡಿದೆ. ಆದರೆ ಅದೃಷ್ಟ ವಶಾತ್ ಯಾರಿಗೂ ಗಾಯ ಉಂಟಾ ಗಿಲ್ಲ. ಇನ್ನು ತಿರುವನಂತಪುರ-ಎಲ್‌ಟಿಟಿ ನೇತ್ರಾವತಿ ಎಕ್ಸ್‌ಪ್ರೆಸ್ ರೈಲು ಗಾಡಿಯ ಹವಾನಿಯಂತ್ರಿತ ಬೋಗಿಗೂ ಕಣ್ಣೂರು ಬಳಿ ವಳಪಟ್ಟಣಂನಲ್ಲಿ ಕಲ್ಲು ತೂರಾಟ ನಡೆದಿದೆ.

You cannot copy contents of this page