ರಾಮಯ್ಯ ಶೆಟ್ಟಿ ಸಂಸ್ಮರಣೆ ವಾರ್ಷಿಕಾಚರಣೆ

ಮಂಜೇಶ್ವರ: ಸಿಪಿಎಂ ಪಕ್ಷವನ್ನು ತುಳುನಾಡಿನ ಮಣ್ಣಿನಲ್ಲಿ ಕಟ್ಟಿ ಬೆಳೆಸಲು, ಹಲವಾರು ಹೋರಾಟಗಳಿಗೆ ನೇತೃತ್ವ ನೀಡಿ ಮಂಜೇಶ್ವರ ಪಂಚಾಯತ್ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ ಜನಪರ ನಾಯಕ ರಾಮಯ್ಯ ಶೆಟ್ಟಿಯವರ ೨೧ನೇ ಸಂಸ್ಮರಣೆ ವಾರ್ಷಿಕ ದಿನಾಚರಣೆ ಹೊಸಬೆಟ್ಟು ಗುಡ್ಡೆಕ್ಕೇರಿ ಬೋಳ್ನಾಡುಗುತ್ತು ಅವರ ಮನೆ ಸಮೀಪ ನಡೆಯಿತು.

ಸಿಪಿಎಂ ಮಂಜೇಶ್ವರ ಏರಿಯಾ ಕಾರ್ಯದರ್ಶಿ ಕೆ.ವಿ. ಕುಂಞಿರಾಮನ್ ಉದ್ಘಾಟಿಸಿದರು. ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಕೆ.ಆರ್. ಜಯಾನಂದ ಅಧ್ಯಕ್ಷತೆ ವಹಿಸಿದರು. ಮಂಜೇಶ್ವರ ಏರಿಯಾ ಸಮಿತಿ ಸದಸ್ಯರಾದ ಡಿ. ಬೂಬ, ಅಬ್ದುಲ್ ರಝಾಕ್ ಚಿಪ್ಪಾರ್, ನವೀನ್ ಕುಮಾರ್, ಗೀತಾ ಸಾಮಾನಿ, ರಾಮಚಂದ್ರ, ಡಿ. ಕಮಲಾಕ್ಷ, ವಿನಯ ಕುಮಾರ್ ಬಾಯಾರು, ಪುರುಷೋತ್ತಮ ಬಳ್ಳೂರು, ಪ್ರಶಾಂತ್ ಕನಿಲ, ರವೀಂದ್ರ ಶೆಟ್ಟಿ, ಪ್ರಭಾಕರ ಶೆಟ್ಟಿ, ಅಶ್ರಫ್ ಕುಂಜತ್ತೂರ್, ಲೋಕೇಶ್ ಚಿನಾಲ, ಮಂಜೇಶ್ವರ ಲೋಕಲ್ ಕಾರ್ಯದರ್ಶಿ ಬಿ.ಎಂ. ಕರುಣಾಕರ ಶೆಟ್ಟಿ, ಬಿ.ಎಂ. ರಾಮಯ್ಯ ಶೆಟ್ಟಿಯವರ ಪತ್ನಿ ವಾರಿಜ ಶೆಟ್ಟಿ, ಪಂಚಾಯತ್ ಅಧ್ಯಕ್ಷೆ ಭಾರತಿ ಸುಳ್ಯಮೆ, ಮಂಜೇಶ್ವರ ಪಂಚಾಯತ್ ಅಭಿವೃದ್ಧಿ ಸ್ಥಾಯೀ ಸಮಿತಿ ಅಧ್ಯಕ್ಷೆ ರಾಧಾ ಎಂ., ಜಯಂತಿ, ಮಂಜೇಶ್ವರ ಸೇವಾ ಸಹಕಾರಿ ಬ್ಯಾಂಕ್ ಉಪಾಧ್ಯಕ್ಷ ವಿಜಯ ಕನಿಲ ಉಪಸ್ಥಿತರಿದ್ದರು. ಕೆ. ಕಮಲಾಕ್ಷ ಸ್ವಾಗತಿಸಿ, ವಂದಿಸಿದರು.

RELATED NEWS

You cannot copy contents of this page