ರಿಂಕು ಸಿಂಗ್ ದಾಂಪತ್ಯಕ್ಕೆ: ಸಂಸದೆ ಪ್ರಿಯ ವಧು

ದೆಹಲಿ: ಭಾರತೀಯ ಕ್ರಿಕೆಟ್ ಪಟು ರಿಂಕು ಸಿಂಗ್ ಹಾಗೂ ಉತ್ತರಪ್ರದೇಶದಿಂದಿರುವ ಸಮಾಜ ವಾದಿ ಪಕ್ಷದ ಸಂಸದೆ ಪ್ರಿಯ ಸರೋಜ್ ವಿವಾಹಿತರಾಗುತ್ತಿದ್ದಾರೆ. ಜೂನ್ ಎಂಟರಂದು ಲಕ್ನೋದಲ್ಲಿ ವಿವಾಹ ನಿಶ್ಚಯ ನಡೆಯಲಿದೆ ಎಂದು ವರದಿಯಾಗಿದೆ. ಓರ್ವ ಗೆಳೆಯನ ಸಹಾಯದಿಂದ ಇವರಿಬ್ಬರೂ ಪರಿಚಯ ಗೊಂಡಿದ್ದಾರೆ.  ಈ ಮೊದಲೇ ಇವರಿಬ್ಬರು ವಿವಾಹವಾಗುವ ಬಗ್ಗೆ ಗಾಸಿಪ್ ಬಹಿರಂಗವಾಗಿತ್ತು. ವಿವಾಹ ವಿಷಯದಲ್ಲಿ ಇವರಿಬ್ಬರ ಕುಟುಂಬದಲ್ಲಿ ಮಾತುಕತೆ ನಡೆಯುತ್ತಿದೆ ಎಂದು ಪ್ರಿಯರ ತಂದೆ ಹಾಗೂ ಎಸ್.ಪಿ. ಶಾಸಕನಾಗಿರುವ ತುಫಾನಿ ಸರೋಜ್ ಬಹಿರಂಗಪಡಿಸಿದ್ದಾರೆ. ಸುಪ್ರಿಂಕೋರ್ಟ್‌ನಲ್ಲಿ ನ್ಯಾಯ ವಾದಿಯಾಗಿರುವ ಪ್ರಿಯ ಅತ್ಯಂತ ಕಡಿಮೆ ಪ್ರಾಯದಲ್ಲಿ ಸಂಸದೆ ಯಾದವರಾಗಿದ್ದಾರೆ. ರಿಂಕು ಸಿಂಗ್ ಕ್ರಿಕೆಟ್‌ನಲ್ಲಿ 33 ಟ್ವೆಂಟಿ- 20ಸ್ವರ್ಧೆಯಲ್ಲಿ, 22 ಏಕದಿನ ಸ್ಪರ್ಧೆಯಲ್ಲಿ ಭಾಗವಹಿಸಿದ್ದು, ಐಪಿಎಲ್‌ನಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್‌ಗೆ ಬೇಕಾಗಿ ನಡೆಸಿದ ಸ್ಪೋಟಕ ಪ್ರದರ್ಶನದಿಂದ ಪ್ರಸಿದ್ಧರಾಗಿದ್ದರು.

RELATED NEWS

You cannot copy contents of this page