ರೈತ ಸಂಘದ ಮಂಜೇಶ್ವರ ವಿಲ್ಲೇಜ್ ಸಮ್ಮೇಳನ

ಮಂಜೇಶ್ವರ: ರೈತ ಸಂಘದ ಮಂಜೇಶ್ವರ ವಿಲ್ಲೇಜ್ ಸಮ್ಮೇಳನ ಇತ್ತೀಚೆಗೆ ಜರಗಿದ್ದು, ಜಿಲ್ಲಾ ಸಮಿತಿ ಸದಸ್ಯ ಭುಜಂಗ ಶೆಟ್ಟಿ ಉದ್ಘಾಟಿಸಿದರು. ಕರುಣಾಕರ ಶೆಟ್ಟಿ ಅಧ್ಯಕ್ಷತೆ ವಹಿಸಿದರು. ಭಾಸ್ಕರ ಮಜಲು ಧ್ವಜಾರೋಹಣಗೈದರು. ಏರಿಯಾ ಕಾರ್ಯದರ್ಶಿ ಅಶೋಕ ಭಂಡಾರಿ, ಏರಿಯಾ ಸಮಿತಿ ಸದಸ್ಯರಾದ ರಾಮಚಂದ್ರ ತೊಟ್ಟೆತ್ತೋಡಿ, ಪ್ರಭಾಕರ ಶೆಟ್ಟಿ ಭಾಗವಹಿಸಿದರು. ನೂತನ ಸಮಿತಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಹೇಮಚಂದ್ರ ಉಳ್ಳಾಲ್, ಉಪಾಧ್ಯಕ್ಷರಾಗಿ ಯತೀಶ್ ಕಾಜೂರು, ಕಾರ್ಯದರ್ಶಿಯಾಗಿ ವಿಜಯ ಕನಿಲ, ಜೊತೆ ಕಾರ್ಯದರ್ಶಿಯಾಗಿ ಪ್ರಸಾದ್ ಕುಮಾರ್, ಕೋಶಾಧಿಕಾರಿಯಾಗಿ ದಿನಕರ ಮಯ್ಯ, ಹಾಗೂ ೧೩ ಮಂದಿ ಸದಸ್ಯರನ್ನು ಆಯ್ಕೆ ಮಾಡಲಾಯಿತು. ಪ್ರೇಮ ಪಿ. ಸ್ವಾಗತಿಸಿ, ವಿಜಯ ಕನಿಲ ವಂದಿಸಿದರು.

RELATED NEWS

You cannot copy contents of this page