ವರ್ಕಾಡಿ ಪಂ.ನಲ್ಲಿ ಶಾಸಕರಿಂದ ರಸ್ತೆ ಲೋಕಾರ್ಪಣೆ

ಮಂಜೇಶ್ವರ : ಶಾಸಕ ಎ ಕೆ ಎಂ ಅಶ್ರಫ್ ರವರು ನಿಧಿ ವಿನಿಯೋಗಿಸಿ ವರ್ಕಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಿರ್ವಹಣೆ ಮಾಡಲಾದ ಮೂರು ರಸ್ತೆಗಳಲ್ಲಿ ಐದು ಲಕ್ಷ ರೂ. ವೆಚ್ಚದಲ್ಲಿ ಕೊಡ್ಲಮೊಗರು ರಸ್ತೆ, ಹದಿನೈದು ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾದ ಬಜಲಕರಿಯ ಪೊಯ್ಯ ರಸ್ತೆ ಹಾಗೂ ಐದು ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾದ ತೌಡುಗೋಳಿ ಆಲಭೆ ರಸ್ತೆ ಗಳನ್ನು ಶಾಸಕರು ಲೋಕಾರ್ಪಣೆ ಗೊಳಿಸಿದರು.
ಪಂಚಾಯತ್ ಅಧ್ಯಕ್ಷೆ ಭಾರತಿ ಅಧ್ಯಕ್ಷತೆ ವಹಿಸಿದರು.  ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷೆ ಮಮತಾ ಶೇಖರ್, ಪಂಚಾಯತ್ ಸದಸ್ಯರಾದ ಅಬ್ದುಲ್ ಮಜೀದ್ ಬಿ ಎ, ಉಮ್ಮರ್, ಪದ್ಮಾವತಿ, ಪಂಚಾಯತ್ ಮಾಜಿ ಅಧ್ಯಕ್ಷ ಪಿ ಬಿ ಅಬೂಬಕ್ಕರ್ ಪಾತೂರು, ಮುಹಮ್ಮದ್ ಮಜಾಲ್, ನಿಕೋಲಸ್ ಮೊಂತೆರೋ, ಹಸೈನಾರ್, ಮುಹಮ್ಮದ್, ಅಬ್ದುಲ್ ಕರೀಂ ಮಾಸ್ಟರ್, ಸಿದ್ದೀಕ್ ಕೊಡ್ಲಮೊಗರು, ರೋನಿ ಡಿಸೋಜ, ಗೋಡ್ವಿನ್, ಬಾಸ್ಕರ್ ಪೊಯ್ಯ, ಫೆಲಿಕ್ಸ್ ಡಿಸೋಜ, ಮುಹಮ್ಮದ್ ಬಟ್ಯಡ್ಕ, ಲತೀಫ್ ತೋಕೆ, ಕುಂಞÂ ಟಿ ಎಂ, ಮೊಯ್ದಿನ್ ಕುಂಞÂ ತೋಕೆ ಭಾಗವಹಿಸಿದರು. ಈ ಸಂದರ್ಭ ಗ್ರಾಮಸ್ಥರು ಶಾಸಕರನ್ನು ಸನ್ಮಾನಿಸಿದರು.

You cannot copy contents of this page