ವಿಜಯಾ ಸುಬ್ರಹ್ಮಣ್ಯರಿಗೆ ಕ.ಸಾ.ಪ.ದಿಂದ ಅಭಿನಂದನೆ

ಕುಂಬಳೆ: ಕನ್ನಡ ಭಾಷೆ ,ಸಾಹಿತ್ಯ, ಕಲೆ, ಸಂಸ್ಕೃತಿಗೆ ಅಮೂಲ್ಯ ಕೊಡುಗೆ ನೀಡಿದ ಹಿರಿಯ ಸಾಧಕರನ್ನು ಅವರ ಮನೆಯಂಗಳದಲ್ಲಿ ಗೌರವಿಸುವ ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ‘ಪರಿಷತ್ತಿನ ನಡಿಗೆ ಹಿರಿಯ ಸಾಧಕರ ಕಡೆಗೆ’ಎಂಬ ಕಾರ್ಯಕ್ರಮದ ಅಂಗವಾಗಿ ಸಾಹಿತಿ ವಿಜಯಾ ಸುಬ್ರಹ್ಮಣ್ಯ, ಕುಂಬಳೆ ಅವರನ್ನು ನಾರಾಯಣ ಮಂಗಲದಲ್ಲಿರುವ ಅವರ ನಿವಾಸ ‘ಕಾರ್ತಿಕೇಯ’ದಲ್ಲಿ ಅಭಿನಂದಿ ಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕ.ಸಾ.ಪ. ಕೇರಳ ಗಡಿನಾಡ ಘಟಕದ ಅಧ್ಯಕ್ಷ ಡಾ. ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ ಅವರು ವಿಜಯಾ ಸುಬ್ರಹ್ಮಣ್ಯರನ್ನು ಶಾಲು ಹೊದೆಸಿ ಅಭಿನಂದಿಸಿದರು.
ಹಿರಿಯ ಸಾಹಿತಿ ವಿ.ಬಿ ಕುಳ ಮರ್ವ ಅಭಿನಂದನಾ ಭಾಷಣ ಮಾಡಿದರು. ವಿಜಯಾ ಸುಬ್ರಹ್ಮಣ್ಯ ಅವರು ಲೇಖಕಿ, ಕಥೆಗಾರ್ತಿ ಮಾತ್ರ ವಲ್ಲ ಉತ್ತಮ ಸಂಘಟಕರೂ ಆಗಿ ದ್ದಾರೆ. ಕೊಡಗಿನ ಗೌರಮ್ಮ ಕಥಾ ಸ್ಪರ್ಧೆಯ ಸಂಚಾಲಕಿಯಾಗಿ, ಮುಜುಂಗಾವಿನ ಭಾರತೀ ವಿದ್ಯಾಲ ಯದ ಗ್ರಂಥ ಪಾಲಕಿಯಾಗಿ ಅವರು ಸಲ್ಲಿಸಿದ ಸೇವೆ ಅನುಪಮವಾದುದು. ‘ಹೊಂಗಿರಣ’ ಕಥಾ ಸಂಕಲನ, ‘ವಿಜಯ ವಿಕಾಸ ‘-ಆತ್ಮಕಥೆ ಸೇರಿದಂತೆ ವೈವಿಧ್ಯ ಪೂರ್ಣವಾದ 11 ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ್ದಾರೆ. ವಿವಿಧ ಪತ್ರಿಕೆಗಳಲ್ಲಿ ಪ್ರಕಟ ವಾದ ಅವರ ಪುರಾಣ ಪುನೀತೆಯರು, ಪುರಾಣ ಪುರುಷರತ್ನಗಳು ಮೊದಲಾದ ಅಂಕಣಗಳು ವಿದ್ಯಾರ್ಥಿಗಳಲ್ಲಿ ಪುರಾಣಗಳ ಕುರಿತು ಆಸಕ್ತಿ ಮೂಡಿಸಿ ಅವರಲ್ಲಿ ಓದುವ ಹವ್ಯಾಸವನ್ನು ಬೆಳೆಸಿದೆ ಎಂದು ಕುಳಮರ್ವ ಹೇಳಿದರು.
ಕಾಸರಗೋಡು ಜಿಲ್ಲಾ ಕನ್ನಡ ಲೇಖಕರ ಸಂಘದ ಕಾರ್ಯಾಧ್ಯಕ್ಷ ಪ್ರೊ. ಪಿ. ಎನ್ ಮೂಡಿತ್ತಾ ಯ, ಖ್ಯಾತ ಕಥೆಗಾರ್ತಿ ಸ್ನೇಹಲತಾ ದಿವಾಕರ್, ನ್ಯಾಯವಾದಿ ಥೋಮಸ್ ಡಿ’ಸೋಜ ಮಾತನಾಡಿದರು. ವೆಂಕಟ ಕೃಷ್ಣ ಶಂಕರ ಮೂಲೆ ,ಸುನೀತಿ ಮುಜುಂಗಾವು ಉಪಸ್ಥಿತರಿದ್ದರು. ವಿಜಯಾಸುಬ್ರಹ್ಮಣ್ಯ ಸನ್ಮಾನಕ್ಕೆ ಕೃತಜ್ಞತೆ ಸಲ್ಲಿಸಿ ಮಾತನಾಡಿದರು. ಕ.ಸಾ.ಪ. ಸಂಘಟನಾ ಕಾರ್ಯದರ್ಶಿ ವಿಶಾಲಾಕ್ಷ ಪುತ್ರಕಳ ಸ್ವಾಗತಿಸಿ, ನಿರೂಪಿಸಿದರು. ಗೌರವ ಕಾರ್ಯದರ್ಶಿ ಪ್ರದೀಪ್ ಕುಮಾರ್ ಶೆಟ್ಟಿ ಬೇಳ ವಂದಿಸಿದರು.

You cannot copy contents of this page