ವಿವಾಹ ವಿಚ್ಛೇಧನಕ್ಕೆ ದೂರು ನೀಡಲು ಬಂದ ಯುವತಿಗೆ ನ್ಯಾಯವಾದಿಯಿಂದ ಕಿರುಕುಳ-ದೂರು

ಕಾಸರಗೋಡು: ವಿವಾಹ ವಿಚ್ಛೇಧನಕ್ಕಾಗಿ ದೂರು ನೀಡಲು ಬಂದ ಯುವತಿಗೆ ನ್ಯಾಯವಾದಿ ಲೈಂಗಿಕ ಕಿರುಕುಳ ನೀಡಿರುವುದಾಗಿ ದೂರಲಾಗಿದೆ. ಕಾಸರಗೋಡು ತಾಯಲಂಗಾಡಿಯ ಫ್ಲಾಟ್‌ವೊಂದರಲ್ಲಿ ವಾಸಿಸುವ ಯುವತಿ ನ್ಯಾಯವಾದಿ ವಿರುದ್ಧ ಪೊಲೀಸರನ್ನು ಸಮೀಪಿಸಿದ್ದಾಳೆ. ಯುವತಿಯ ದೂರಿನ ಹಿನ್ನೆಲೆಯಲ್ಲಿ ನ್ಯಾಯವಾದಿಯಾಗಿರುವ ನಿಖಿಲ್ ನಾರಾಯಣನ್ ವಿರುದ್ಧ ಕಾಸರಗೋಡು ಮಹಿಳಾ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

ಕಾಞಂಗಾಡ್ ನಿವಾಸಿಯೂ ಮರ್ಚೆಂಟ್ ನೇವಿ ಉದ್ಯೋಗಿಯಾದ ಯುವತಿಯ ಪತಿ ಮದುವೆ ಬಳಿಕ ಉದ್ಯೋಗಕ್ಕಾಗಿ ವಿದೇಶಕ್ಕೆ ತೆರಳುವ  ಅಲ್ಪ ಮುಂಚೆ ಯುವತಿಗೆ ಫ್ಲಾಟ್‌ನಲ್ಲಿ ವಾಸ ಸೌಕರ್ಯ ಒದಗಿಸಿಕೊಟ್ಟಿರುವುದಾಗಿ  ಹೇಳಲಾಗುತ್ತಿದೆ. ಅನಂತರ ಪತಿ ಹಾಗೂ ಯುವತಿ ಮಧ್ಯೆ ಭಿನ್ನಾಭಿಪ್ರಾಯ ಹುಟ್ಟಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ವಿವಾಹ ವಿಚ್ಛೇದನಕ್ಕಾಗಿ ಯುವತಿ ನ್ಯಾಯವಾದಿಯನ್ನು ಸಮೀಪಿಸಿದ್ದಳು. ಅನಂತರ ಕೇಸಿಗೆ ಸಂಬಂಧಿಸಿದ ಮಾಹಿತಿಗಳನ್ನು ತಿಳಿಯಲು ಇವರು ಪರಸ್ಪರ ಸಂಪರ್ಕಿಸಿದ್ದರು. ಈ ಮಧ್ಯೆ ನ್ಯಾಯವಾದಿ ಮದುವೆಯಾಗುವುದಾಗಿ ಯುವತಿ ನೀಡಿದ ಭರವಸೆಯೊಡ್ಡಿ ಕಿರುಕುಳ ನೀಡಲಾರಂಭಿಸಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಅನಂತರ ನ್ಯಾಯ ವಾದಿಯ ನಿಯಂತ್ರಣದಲ್ಲಿ ಯುವತಿಗೆ ಬೇರೊಂದು ವಾಸಸ್ಥಳ ಏರ್ಪಡಿಸಿಕೊಟ್ಟಿದ್ದು, ಅಲ್ಲಿ ನಿರಂತರ ಲೈಂಗಿಕ ಸಂಪರ್ಕದಲ್ಲಿ ತೊಡಗಿದ್ದನೆನ್ನಲಾಗಿದೆ. ಈ ಬಗ್ಗೆ ಯುವತಿ ಬಾರ್ ಅಸೋಸಿಯೇಶನ್‌ಗೂ ದೂರು ನೀಡಿದ್ದಾಳೆಂದು ಹೇಳಲಾಗುತ್ತಿದೆ.

RELATED NEWS

You cannot copy contents of this page