ಶನಿವಾರ ಶಾಲಾ ಚಟುವಟಿಕೆ ಆದೇಶ ಹಿಂತೆಗೆತ

ತಿರುವನಂತಪುರ: ರಾಜ್ಯದಲ್ಲಿ ಹತ್ತನೇ ತರಗತಿವರೆಗಿನ ಸರಕಾರಿ, ಐಡೆಡ್ ಶಾಲೆಗಳಲ್ಲಿ ಶನಿವಾರ ಚಟುವಟಿಕೆ ದಿನವಾಗಿಸಿದ ಆದೇಶವನ್ನು ಸಾರ್ವಜನಿಕ ಶಿಕ್ಷಣ ನಿರ್ದೇಶಕರು ಹಿಂತೆಗೆದುಕೊಂಡಿದ್ದಾರೆ. ಶನಿವಾರ ಚಟುವಟಿಕೆ ದಿನವಾಗಿ ಸರಕಾರ ಈ ಹಿಂದೆ ಹೊರಡಿಸಿದ್ದ ಆದೇಶವನ್ನು ಆಗಸ್ಟ್ 1ರಂದು ಹೈಕೋರ್ಟ್ ರದ್ದುಪಡಿಸಿತ್ತು. ಅಧ್ಯಾಪಕ ಸಂಘಟನೆಗಳ ಹಾಗೂ ವಿದ್ಯಾರ್ಥಿಗಳ ಸಹಿತ ಸಲ್ಲಿಸಿದ ಅರ್ಜಿಯನ್ನು ಪರಿಗಣಿಸಿ ಸರಕಾರದ ಆದೇಶವನ್ನು ನ್ಯಾಯಾಲಯ ರದ್ದುಗೊಳಿಸಿತ್ತು. ಈ ಹಿನ್ನೆಲೆಯಲ್ಲಿ ಈ ಹಿಂದೆ ಹೊರಡಿಸಿದ್ದ ಆದೇಶವನ್ನು ಸರಕಾರ ಈಗ ಹಿಂತೆಗೆದುಕೊಂಡಿದೆ.

Leave a Reply

Your email address will not be published. Required fields are marked *

You cannot copy content of this page