ಶಾಲೆಗಳಲ್ಲಿ ಮಕ್ಕಳ ಹಾಜರು: ಸ್ಥಳೀಯಾಡಳಿತ ಸಂಸ್ಥೆಗಳಿಂದ ಪರಿಶೀಲನೆ
ತಿರುವನಂತಪುರ: ಶಾಲೆಗಳಲ್ಲಿ ಮಕ್ಕಳ ಹಾಜರಿ ಇನ್ನು ಮುಂದೆ ಸ್ಥಳೀಯಾಡಳಿತ ಸಂಸ್ಥೆಗಳ ನೇತೃತ್ವದಲ್ಲಿ ಪರಿಶೀಲಿಸಲಾಗುವುದು. ಈ ವರ್ಷದ ಮಾದಕ ವಿರುದ್ಧ ಅಭಿಯಾನದಂ ಗವಾಗಿ ಪ್ರತೀ ಸ್ಥಳೀಯಾಡಳಿತ ಸಂಸ್ಥೆಗಳು ಅವುಗಳ ವ್ಯಾಪ್ತಿಯಲ್ಲಿರುವ ಶಾಲಾ ಮಕ್ಕಳ ರಿಜಿಸ್ಟರ್ನ ಹೊಣೆಗಾರಿಕೆ ವಹಿ ಸುವಂತೆ ಸರಕಾರ ನಿರ್ದೇಶ ನೀಡಿದೆ. ಇದರ ಜೊತೆಗೆ ಪ್ರತೀ ದಿನದ ಮಕ್ಕಳ ಹಾಜರಿಯನ್ನು ಲೆಕ್ಕಹಾಕಿ ಅಗತ್ಯದ ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಲಾಗಿದೆ. ಪಂಚಾಯತ್ ಮಟ್ಟದ ಜಾಗ್ರತಾ ಸಮಿತಿಗಳು ಜನಜಾಗ್ರತಾ ಸಮಿತಿ ಸಭೆ ಕರೆದು ಆಯಾ ಪ್ರದೇಶದ ಮಾದಕ ವಿರುದ್ಧ ಚಟುವಟಿಕೆಗಳಿಗೆ ನೇತೃತ್ವ ನೀಡುವಂತೆ ತಿಳಿಸಲಾಗಿದೆ.