ಶ್ರೀಗಂಧ ಕಳವು ಸ್ಥಳೀಯರಿಂದ ಇಬ್ಬರ ಸೆರೆ
ಮುಳ್ಳೇರಿಯ: ಶಂಕಾಸ್ಪದವಾದ ರೀತಿಯಲ್ಲಿ ಶ್ರೀಗಂಧ ಕೊರಡಿನೊಂ ದಿಗೆ ಕಂಡುಬಂದ ವ್ಯಕ್ತಿಯನ್ನು ಸ್ಥಳೀಯರು ಸೆರೆಹಿಡಿದು ಪೊಲೀಸರಿಗೆ ಹಸ್ತಾಂತರಿಸಿದರು. ಪೊಲೀಸರು ನಡೆಸಿದ ತನಿಖೆಯಲ್ಲಿ ಈಮೊದಲು ಶ್ರೀಗಂಧ ಕೊರಡು ಗಳನ್ನು ಖರೀದಿಸಿದ ಯುವಕನನ್ನು ಪತ್ತೆಹಚ್ಚಿ ಬಂಧಿಸಲಾಗಿದೆ. ಪುಂಡೂರು ನೆಕ್ರಾಜೆಯ ರಾಮನ್ (೪೦), ಆಲಂಪಾಡಿ, ನೆಕ್ಕರೆಯ ಇರ್ಷಾದ್ (೩೯) ಎಂಬವರನ್ನು ಆದೂರು ಪೊಲೀಸರು ಬಂಧಿಸಿದ್ದಾರೆ. ಘಟನೆ ಬಗ್ಗೆ ಪೊಲೀಸರು ನೀಡಿದ ಮಾಹಿತಿಯಂತೆ ಮುಳಿಯಾರು ಚೋಕೆಮೂಲೆಯ ರಾಮಚಂದ್ರ ಭಟ್ರ ಹಿತ್ತಿಲಿನಿಂದ ಕೆಲವು ದಿನಗಳ ಹಿಂದೆ ಶ್ರೀಗಂಧದ ಮರವನ್ನು ಕಳವು ನಡೆಸಲಾಗಿತ್ತು. ಈ ಬಗ್ಗೆ ನೀಡಿದ ದೂರಿನಲ್ಲಿ ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದ ಮಧ್ಯೆ ರಾಮನ್ ನನ್ನು ನಿನ್ನೆ ರಾತ್ರಿ ಸ್ಥಳೀಯರು ಎರಡು ತುಂಡು ಶ್ರೀಗಂಧ ಕೊರಡುಗಳ ಸಹಿತ ಸೆರೆಹಿಡಿದಿದ್ದರು. ಪೊಲೀಸರು ತಲುಪಿ ಈತನನ್ನು ಕಸ್ಟಡಿಗೆ ತೆಗೆದು ಪ್ರಶ್ನಿಸಿದಾಗ ರಾಮಚಂದ್ರ ಭಟ್ರ ಹಿತ್ತಿಲಿನಿಂದ ಇದನ್ನು ಕಳವುಗೈದಿರುವು ದಾಗಿಯೂ ನೆಕ್ಕರೆಯ ಇರ್ಷಾದ್ ಅದನ್ನು ಮಾರಾಟ ನಡೆಸಿರುವುದಾ ಗಿಯೂ ತಿಳಿಸಿದ್ದಾನೆ. ಬಳಿಕ ಇರ್ಷಾದ್ನ ಮನೆಯಲ್ಲಿ ಪೊಲೀಸರು ನಡೆಸಿದ ತಪಾಸಣೆಯಲ್ಲಿ ಶ್ರೀಗಂಧ ಕೊರಡು ಗಳನ್ನು ಪತ್ತೆಹಚ್ಚಿ ಆತನನ್ನು ಆರೋಪಿ ಯನ್ನಾಗಿ ಮಾಡಿದರು. ಅಂದು ಕಡಿದ ಶ್ರೀಗಂಧ ಮರದ ಬೇರುಗಳನ್ನು ಕೊಂಡೊಯ್ಯುವಾಗ ರಾಮನ್ನನ್ನು ಸ್ಥಳೀಯರು ಸೆರೆಹಿಡಿದಿದ್ದಾರೆ.