ಸಚಿವ ಶಿವನ್ ಕುಟ್ಟಿ ಮಹಿಳಾ ವಿರುದ್ಧ ಮನೋಭಾವದ ಪ್ರತಿರೂಪ- ಎಂ.ಎಲ್. ಅಶ್ವಿನಿ

ಕಾಸರಗೋಡು: ರಾಜ್ಯ ಸರಕಾರ ಹಾಗೂ ರಾಜಭವನ ಜಂಟಿಯಾಗಿ ಆಯೋಜಿಸಿದ ಕಾರ್ಯಕ್ರಮದಲ್ಲಿರಿಸಿದ್ದ ಭಾರತಮಾತೆಯ ಛಾಯಾಚಿತ್ರವನ್ನು ಕಾವಿ ಪತಾಕೆ ಎತ್ತಿ ಹಿಡಿದ ಮಹಿಳೆಯ ದ್ದಾಗಿದೆ ಎಂದು ಸಚಿವ ಶಿವನ್ ಕುಟ್ಟಿ ನಡೆಸಿದ ಪರಾಮರ್ಶೆ ಅವರ ಮಹಿಳಾ ವಿರುದ್ಧ- ಸಂಕುಚಿತ ಮನಸ್ಸಿನ ಭಾವನೆ ಯಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ನುಡಿದರು. ವಿದೇಶದಲ್ಲಿ ರೂಪುಗೊಂಡ ಕಮ್ಯೂನಿಸ್ಟ್ ಸಿದ್ಧಾಂತಗಳಿಗೆ ಭಾರತಾಂಬೆಯೆಂದಲ್ಲ, ನಮ್ಮ ದೇಶದ ಯಾವುದನ್ನೂ ಕೂಡಾ ಅರಗಿಸಿಕೊಳ್ಳಲು ಸಾಧ್ಯವಿಲ್ಲವೆಂದು ಶಿವನ್ ಕುಟ್ಟಿ ಮತ್ತೊಮ್ಮೆ ಸ್ಪಷ್ಟಪಡಿಸಿ ದ್ದಾರೆ ಎಂದು ಅವರು ನುಡಿದರು.

1947ರಲ್ಲಿ ಭಾರತವನ್ನು 18 ತುಂಡುಗಳಾಗಿ ವಿಭಜಿಸಬೇಕೆಂದು ಆಗ್ರಹಿಸಿ ಸ್ವಾತಂತ್ರ್ಯ ದಿನದಂದು ಕಪ್ಪು ದಿನಾಚರಣೆ ನಡೆಸಿದವರಾಗಿದ್ದಾರೆ ಕಮ್ಯೂನಿಸ್ಟ್‌ನವರು. ಕಮ್ಯೂನಿಸಂ ಬಾಕಿ ಉಳಿದಿರುವ ಕೊನೆಯ ರಾಜ್ಯವಾದ ಕೇರಳದ ಜನರು ವಿಭಜನೆ- ಭಾರತ ವಿರುದ್ಧ ಕಮ್ಯೂನಿಸ್ಟ್ ಸಿದ್ಧಾಂತವನ್ನು ತಿರಸ್ಕರಿಸುವ ಕಾಲ ಅತೀ ದೂರವಿಲ್ಲ ವೆಂದು ಅಶ್ವಿನಿ ಮುನ್ನೆಚ್ಚರಿಕೆ ನೀಡಿದ್ದಾರೆ. ಆಡಳಿತ ಸಾಧನೆಯಾಗಿ ಏನನ್ನೂ ಹೇಳಲು ಇಲ್ಲದ ಕಾರಣ ವಿವಿಧ ಸಮಸ್ಯೆಗಳಿಂದ ಜನರ ಗಮನವನ್ನು ದಾರಿ ತಪ್ಪಿಸಲು ಪಿಣರಾಯಿ ವಿಜಯನ್ ಸರಕಾರ ಪ್ರಜ್ಞಾಪೂರ್ವಕ ಸೃಷ್ಟಿಸಿರುವುದಾಗಿದೆ ಭಾರತಾಂಬೆಯ ವಿವಾದವೆಂದು ಅಶ್ವಿನಿ ನುಡಿದರು.

Leave a Reply

Your email address will not be published. Required fields are marked *

You cannot copy content of this page