ಸಮೋಸ ವಿಷಯದಲ್ಲಿ ತರ್ಕ ಹೋಟೆಲ್ ಮಾಲಕನನ್ನು ಗುಂಡಿಕ್ಕಿ ಕೊಂದ ತಂಡ

ಲಕ್ನೋ: ಕೇವಲ ಒಂದು ಸಮೋಸದ ವಿಷಯದಲ್ಲಿ ಉಂಟಾದ ತರ್ಕ ಹೋಟೆಲ್ ಮಾಲಕನ ಕೊಲೆಯಲ್ಲಿ  ಪರ್ಯವಸಾನ ಗೊಂಡಿದೆ. ಉತ್ತರಪ್ರದೇಶದ ಗುರುಗ್ರಾಮ್ ಫಾರೂಕ್ ನಗರದಲ್ಲಿ ಈ ಘಟನೆ ನಡೆದಿದೆ. ರಾಕೇಶ್ ಕುಮಾರ್ ಎಂಬವರು ಕೊಲೆಗೀಡಾದ ವ್ಯಕ್ತಿಯಾಗಿದ್ದಾರೆ. ಸೋಮವಾರ ಬೆಳಿಗ್ಗೆ ಯುವಕರ ತಂಡವೊಂದು ಹೋಟೆಲ್‌ಗೆ ತಲುಪಿ ಚಹಾ ಕುಡಿದಿತ್ತು. ಬಳಿಕ ಸಮೋಸ ಪಡೆದ ವಿಷಯದಲ್ಲಿ  ರಾಕೇಶ್ ಹಾಗೂ ತಂಡದ ಮಧ್ಯೆ ತರ್ಕವುಂಟಾಗಿತ್ತು. ಈ ವೇಳೆ ಕೊಲೆ ಬೆದರಿಕೆಯೊಡ್ಡಿ ತಂಡ ಅಲ್ಲಿಂದ ಮರಳಿತ್ತು. ಈ ಬಗ್ಗೆ ರಾಕೇಶ್ ಪೊಲೀಸ್ ಠಾಣೆಗೆ ತಲುಪಿ ದೂರು ನೀಡಿದ್ದರೆನ್ನಲಾಗಿದೆ. ಈಮಧ್ಯೆ ನಿನ್ನೆ ಬೆಳಿಗ್ಗೆ ಮತ್ತೆ ಹೋಟೆಲ್‌ಗೆ ತಲುಪಿದ ತಂಡ ಗುಂಡು ಹಾರಿಸಿ ರಾಕೇಶ್‌ರನ್ನು ಕೊಲೆಗೈದಿದೆ ಎನ್ನಲಾಗಿದೆ. ಆರೋಪಿಗಳಿಗಾಗಿ ಪೊಲೀಸರು ಶೋಧ ಆರಂಭಿಸಿದ್ದಾರೆ.

RELATED NEWS

You cannot copy contents of this page