ಸರ್ವೀಸ್ ರಸ್ತೆಯನ್ನು ತೊರೆದ ಸಾರಿಗೆ ಬಸ್‌ಗಳು: ಪೊಸೋಟ್‌ನಲ್ಲಿ ಸ್ಥಳೀಯರಿಂದ ಪ್ರತಿಭಟನೆ

ಮಂಜೇಶ್ವರ: ಸಾರಿಗೆ ಬಸ್‌ಗಳು  ಸರ್ವೀಸ್ ರಸ್ತೆಯಲ್ಲಿ ಸಂಚರಿಸದಿರುವುದನ್ನು ಪ್ರತಿಭಟಿಸಿ ಪೊಸೋಟ್‌ನಲ್ಲಿ ಸ್ಥಳೀಯರು ಪ್ರತಿಭಟನೆ ನಡೆಸಿದರು. ನೂತನ ಷಟ್ಪಥ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪೂರ್ಣಗೊಂಡ ಬಳಿಕ ಕಾಸರಗೋಡು- ಮಂಗಳೂರು ರೂಟ್‌ನ ಕೇರಳ, ಕರ್ನಾಟಕ ಸಾರಿಗೆ ಬಸ್‌ಗಳು ಸರ್ವೀಸ್ ರಸ್ತೆಯನ್ನು ಬಿಟ್ಟು ಪೈಪೋಟಿಯಿಂದ ಸಾಗುವಾಗ ಹೆದ್ದಾರಿಯಲ್ಲೇ ಸಂಚರಿಸುತ್ತಿರುವುದಾಗಿ ದೂರಿದ್ದು, ಇದು ಪ್ರಯಾಣಿಕರಿಗೆ ಸಮಸ್ಯೆ ಉಂಟು ಮಾಡುತ್ತಿದೆ.

ಬಸ್‌ಗಳು ಸರ್ವೀಸ್ ರಸ್ತೆಯಲ್ಲೇ ಸಂಚರಿಸಬೇಕೆಂಬ ನಿರ್ದೇಶವಿದ್ದರೂ, ಕೆಲವು ಬಸ್‌ಗಳು ಹೆದ್ದಾರಿಯಲ್ಲೇ ಸಂಚರಿ ಸುತ್ತಿವೆ. ಇದರಿಂದಾಗಿ ಹೆದ್ದಾರಿಯಲ್ಲಿ ಇಳಿಯುವ ಪ್ರಯಾಣಿಕರು ಅತ್ತಿತ್ತ ಸಂಚರಿಸಲಾಗದೆ ಕಷ್ಟಪಡುತ್ತಿದ್ದಾರೆ. ಸರ್ವೀಸ್ ರಸ್ತೆಗೆ ಪ್ರವೇಶಿಸಲು ದಾರಿಯಿಲ್ಲದ ಸ್ಥಳದಲ್ಲಿ ಬಸ್‌ಗಳನ್ನು ನಿಲ್ಲಿಸಲಾಗುತ್ತಿದ್ದು, ಇದು ಅಪಾಯಕ್ಕೆ ಕಾರಣವಾಗಬಹುದೆಂದು ಆತಂಕಪಡ ಲಾಗಿದೆ. ಇದಲ್ಲದೆ ಸರ್ವೀಸ್ ರಸ್ತೆಯಲ್ಲಿ ಬಸ್‌ಗಾಗಿ ಕಾಯುವವರಿಗೆ ಬಸ್ ಲಭಿಸದೆ ತೊಂದರೆಯೂ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಪೊಸೋಟ್‌ನಲ್ಲಿ ಸ್ಥಳೀಯರು ಬಸ್ ನ್ನು ತಡೆದು ಸರ್ವೀಸ್ ರಸ್ತೆಯಲ್ಲೇ ಸಾಗುವಂತೆ ಒತ್ತಾಯಿಸಿದರು. ಕೆಲವು ದಿನಗಳ ಹಿಂದೆ ಕುಂಜತ್ತೂರಿನಲ್ಲೂ ಇದೇ ರೀತಿಯ ಪ್ರತಿಭಟನೆ ನಡೆಸಲಾಗಿತ್ತು. ಬಸ್‌ಗಳು ಸರ್ವೀಸ್ ರಸ್ತೆಯಲ್ಲೇ ಸಂಚರಿಸಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.

RELATED NEWS
ಬದಿಯಡ್ಕದಲ್ಲಿ ಹಸಿರು ಕ್ರಿಯಾಸೇನೆಯಲ್ಲೂ ವಂಚನೆ: 4,000 ರೂ. ಯೂಸರ್ ಫೀಸ್ ಬ್ಯಾಂಕ್‌ನಲ್ಲಿ ಪಾವತಿಸಿ ಪಂ. ಕಚೇರಿಯಲ್ಲಿ ನೀಡಿದ ರಶೀದಿಯಲ್ಲಿ 40,000 ವಾಗಿ ತಿದ್ದುಪಡಿ; ಮಹಿಳಾ ಅಸೋಸಿಯೇಶನ್ ವಿಲ್ಲೇಜ್ ಅಧ್ಯಕ್ಷೆ ಸಹಿತ ಇಬ್ಬರನ್ನು ಕೆಲಸದಿಂದ ತೆರವು

You cannot copy contents of this page