ಸಹಕಾರಿ ಠೇವಣಿಗೆ ೦.೭೫ ಶೇ.ವರೆಗೆ ಬಡ್ಡಿ ಹೆಚ್ಚಳ

ತಿರುವನಂತಪುರ: ಪ್ರಾಥಮಿಕ ಸಹಕಾರಿ ಸಂಘಗಳ ಹಾಗೂ ಕೇರಳ ಬ್ಯಾಂಕ್‌ನ ಠೇವಣಿಗಳ ಬಡ್ಡಿದರವನ್ನು ೦.೫ ಶೇ.ದಿಂದ ೦.೭೫ ಶೇಕಡಾವರೆಗೆ ಹೆಚ್ಚಿಸಲಾಗಿದೆ ಎಂದು ಸಚಿವ ವಿ.ಎನ್. ವಾಸವನ್ ತಿಳಿಸಿದ್ದಾರೆ. ಬಡ್ಡಿ ನಿರ್ಣಯ ಸಮಿತಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಸಹಕಾರಿ ಠೇವಣಿ ಸಂಗ್ರಹದ ಮೂಲಕ ೯,೦೦೦ ಕೋಟಿ ರೂ.ವನ್ನು ಗುರಿ ಇರಿಸಲಾಗಿದೆ. ಒಂದು ಮನೆಯಿಂದ ಒಂದು ಹೊಸ ಖಾತೆ ಎಂಬ ಪ್ರಚಾರದೊಂದಿಗೆ ಆರಂಭಿಸುವ ಕಾರ್ಯಕ್ರಮ ಈ ತಿಂಗಳ ೧೦ರಿಂದ ಆರಂಭಗೊಳ್ಳುವುದು. ಪ್ರಾಥಮಿಕ ಸಹಕಾರಿ ಬ್ಯಾಂಕ್‌ಗಳ ಮೂಲಕ ೭೨೫೦ ಕೋಟಿ ರೂ. ಕೇರಳ ಬ್ಯಾಂಕ್ ಮೂಲಕ ೧,೭೫೦ ಕೋಟಿ  ರೂ. ರಾಜ್ಯ ಸಹಕಾರಿ ಕೃಷಿ ಅಭಿವೃದ್ಧಿ ಬ್ಯಾಂಕ್‌ಗಳ ಮೂಲಕ ೧೫೦ ಕೋಟಿ ರೂ. ಸಂಗ್ರಹಿಸಲು ಗುರಿ ಇರಿಸಲಾಗಿದೆ.

RELATED NEWS

You cannot copy contents of this page