ಸಿಪಿಐ ನೇತಾರ ಕೃಷ್ಣ ಶೆಟ್ಟಿ ಸಂಸ್ಮರಣೆ

ಮಂಜೇಶ್ವರ: ಸಿಪಿಐ ಮಂ ಜೇಶ್ವರ ಮಂಡಲ ಕಾರ್ಯದರ್ಶಿ, ಕಿಸಾನ್ ಸಭಾ ರಾಜ್ಯ  ಸಮಿತಿ ಸದಸ್ಯ, ಮಜಿಬೈಲ್ ಬ್ಯಾಂಕ್ ಅಧ್ಯಕ್ಷರಾಗಿ ಹಲವು ವರ್ಷ ಸೇವೆ ಸಲ್ಲಿಸಿದ್ದ  ಕಮ್ಯೂನಿಸ್ಟ್ ನೇತಾರ ಮೂಡಂಬೈಲು ನೀರುಳ್ಳಿ ಎಂ. ಕೃಷ್ಣ ಶೆಟ್ಟಿಯವರ 15ನೇ ಸಂಸ್ಮರಣೆ  ಕಾರ್ಯಕ್ರಮ ಅವರ ನಿವಾಸದ ಸ್ಮೃತಿ ಮಂಟಪದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಸಿಪಿಐ ರಾಜ್ಯ ಸಮಿತಿ ಸದಸ್ಯ ಟಿ. ಕೃಷ್ಣನ್ ಉದ್ಘಾಟಿಸಿದರು. ಸಿಪಿಐ ಮೀಂಜ ಲೋಕಲ್ ಸಮಿತಿ ಸದಸ್ಯ ಪಿ. ಶಾಂತಾರಾಮ ಶೆಟ್ಟಿ ಅಧ್ಯಕ್ಷತೆ ವಹಿಸಿದರು. ಲೋಕಲ್ ಕಮಿಟಿ ಸದಸ್ಯ ಉದಯ ಕುಮಾರ್ ಕರಿಬೈಲು, ಶರತ್ ಕುಮಾರ್  ಬೆಜ್ಜ, ಮುಸ್ತಫಾ ಕಡಂಬಾರ್, ಸತೀಶ್ ಪಜಿಂಗಾರ್, ಹರಿಜೀವನ್‌ದಾಸ್, ಕಿಶೋರ್ ಕುಳೂರು, ಪತ್ನಿ ಸರೋಜಿನಿ, ಪುತ್ರಿ ಶಶಿಕಲ, ಅಳಿಯ ಗಣೇಶ್ ಮೊದಲಾ ದವರು  ಭಾಗವಹಿಸಿದರು. ಸಿಪಿಐ ಮೀಂಜ ಲೋಕಲ್ ಕಾರ್ಯದರ್ಶಿ ಗಂಗಾಧರ ಕೊಡ್ಡೆ ಸ್ವಾಗತಿಸಿದರು.

RELATED NEWS

You cannot copy contents of this page