ಸೂರಂಬೈಲು ಶಾಲೆಯಲ್ಲಿ ಕನ್ನಡ ಸಾಹಿತ್ಯ ಅಭಿಯಾನ 28ರಂದು

ಕಾಸರಗೋಡು: ನುಳ್ಳಿಪ್ಪಾಡಿಯ ಸೀತಮ್ಮ ಪುರುಷ ನಾಯಕ ಕನ್ನಡ ಭವನ ಮತ್ತು ಗ್ರಂಥಾಲಯದ ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿ ಷತ್ತಿನ ಜಿಲ್ಲಾ ಘಟಕದ ಆಶ್ರಯದಲ್ಲಿ ವಿದ್ಯಾರ್ಥಿಗಳಿಗಾಗಿ ನಡೆಯುವ ಏಕದಿನ ಕನ್ನಡ ಸಾಹಿತ್ಯ ಅಭಿಯಾನವಾದ ‘ಕನ್ನಡದ ನಡಿಗೆ ಶಾಲೆಯ ಕಡೆಗೆ’ ಶೈಕ್ಷಣಿಕ ಶಿಬಿರದ 2ನೇ ಕಾರ್ಯಕ್ರಮ ಜೂನ್ 28ರಂದು ಬೆಳಗ್ಗೆ 10ರಿಂದ ಕುಂಬಳೆ ಸಮೀಪದ ಸೂರಂಬೈಲು ಸರಕಾರಿ ಪ್ರೌಢಶಾಲೆಯಲ್ಲಿ ನಡೆಯಲಿದೆ. ಆರಿಕ್ಕಾಡಿ ಕಾರ್ಳೆ ಶ್ರೀ ಕಾಳಿಕಾಂಬಾ ದೇವಸ್ಥಾನದ ತಂತ್ರಿವರ್ಯ ಬ್ರಹ್ಮಶ್ರೀ ಪುರೋಹಿತ ಕೆ. ರಾಮಕೃಷ್ಣ ಆಚಾರ್ಯ ಉದ್ಘಾಟಿಸುವರು. ಸಂಘಟನೆಯ ಜಿಲ್ಲಾ ಸಮಿತಿ ಗೌರವಾಧ್ಯಕ್ಷ ವಿ.ಬಿ ಕುಳಮರ್ವ ಅಧ್ಯಕ್ಷತೆ ವಹಿಸುವರು. ಮುಖ್ಯ ಶಿಕ್ಷಕಿ ಸುನಿತಾ ಎ, ಪಿಟಿಎ ಅಧ್ಯಕ್ಷ ಬಾಬು ಮಾಸ್ತರ್ ಪಿ. ಶುಭ ಹಾರೈಸುವರು. ಸಂಪನ್ಮೂಲ ವ್ಯಕ್ತಿಗಳಾಗಿ ಶಿಕ್ಷಣ ತಜ್ಞ ವಿ.ಬಿ ಕುಳಮರ್ವ, ಡಾ. ಕೊಳ್ಚಪ್ಪೆ ಗೋವಿಂದ ಭಟ್, ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ವಿರಾಜ್ ಅಡೂರು ಭಾಗವಹಿಸುವರು. ಶಿಕ್ಷಕ ಚಂದ್ರಶೇಖರ ಡಿ, ಸಂಘಟನೆಯ ಕಾರ್ಯದರ್ಶಿ ದೇವರಾಜ್ ಆಚಾರ್ಯ ಸೂರಂಬೈಲ್, ಸದಸ್ಯರಾದ ಶಿಕ್ಷಕಿ ಚಿತ್ರಕಲಾ ದೇವರಾಜ ಆಚಾರ್ಯ ಸೂರಂಬೈಲ್, ದರ್ಶಿನ್ ಚಿರಾಲ್ ಡಿ, ಧನ್ವಿಕಾ ಡಿ. ಸಹಕರಿಸುವರು.

You cannot copy contents of this page