ಹದಿನಾಲ್ಕರ ಬಾಲಕಿಗೆ ದೌರ್ಜನ್ಯ: ಇಬ್ಬರ ಸೆರೆ

ಪತ್ತನಂತಿಟ್ಟ: ಹದಿನಾಲ್ಕರ ಹರೆಯದ ಬಾಲಕಿಗೆ ಲೈಂಗಿಕ ದೌರ್ಜನ್ಯಗೈದ ಇಬ್ಬರನ್ನು ಬಂಧಿಸಲಾಗಿದೆ. ಇರನಿಪೆರೂರ್, ಪಡಿಞಾ,ಟೋತರ ಸ್ವಾತಿ ಭವನದ ತುಳಸೀದಾಸ್ (೩೬), ಕಿಳಿಕನ್ ಓತರ ಮೋಡಿಯಿಲ್ ನಿವಾಸಿ ಶ್ರೀಜಿತ್ (೩೪) ಎಂಬಿವರನ್ನು ತಿರುವಲ್ಲ ಪೊಲೀಸರು ಬಂಧಿಸಿದ್ದಾರೆ. ಲೈಂಗಿಕ ದೌರ್ಜನ್ಯ ಬಗ್ಗೆ ಬಾಲಕಿ ತನ್ನ ಗೆಳತಿಯೊಂದಿಗೆ ಪ್ರಥಮವಾಗಿ ತಿಳಿಸಿದ್ದಳು. ಗೆಳತಿ ಇದನ್ನು ಚೈಲ್ಡ್ ಲೈನ್‌ಗೆ ತಿಳಿಸಿದ್ದಾರೆ. ಅವರು ನಡೆಸಿದ ತನಿಖೆಯಲ್ಲಿ ದೌರ್ಜನ್ಯ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದು ಬಂದಿದೆ. ಬಾಲಕಿ ತನ್ನ ವಿರುದ್ಧ ನಡೆಸಿದ ದೌರ್ಜನ್ಯದ ಬಗ್ಗೆ ಸಂಪೂರ್ಣ ಹೇಳಿಕೆ ನೀಡಿದ್ದಾಳೆ.

You cannot copy contents of this page