ಹನಿಟ್ರಾಪ್, ನಕಲಿ ಅಧಿಕಾರಿಯ ಸೋಗಿನಲ್ಲಿ ವಂಚನೆ : ಬಂಧಿತ ಯುವತಿ ವಿರುದ್ಧ ಮತ್ತೆ ಮೂರು ಪ್ರಕರಣ ದಾಖಲು

ಕಾಸರಗೋಡು: ಐಎಸ್‌ಆರ್ ಒದ ಟೆಕ್ನಿಕಲ್ ಅಸಿಸ್ಟೆಂಟ್ ಎಂಬ ನಕಲಿ ಅಧಿಕಾರಿಯ ಸೋಗಿನಲ್ಲಿ ಹಣ ಎಗರಿಸಿದ ಪ್ರಕರಣಕ್ಕೆ ಸಂಬಂಧಿಸಿ ಬಂಧಿತಳಾಗಿ ಈಗ ನ್ಯಾಯಾಂಗ ಬಂಧನದಲ್ಲಿರುವ ಚೆಮ್ನಾಡ್ ಕೊಂಬನಡ್ಕ ನಿವಾಸಿ ಶ್ರುತಿ ಚಂದ್ರಶೇಖ ರನ್ (34)ಳ ವಿರುದ್ಧ ಮತ್ತೆ ಮೂರು ಹೊಸ ಪ್ರಕರಣಗಳು ದಾಖಲಾಗಿವೆ.

ಪುಲ್ಲೂರು ಪೆರಿಯಾ ಪಂ.  ನಿವಾಸಿಯಾದ ಯುವಕನೋರ್ವ ನೀಡಿದ ದೂರಿನಂತೆ ಮೇಲ್ಪರಂಬ ಪೊಲೀಸರು ಶ್ರುತಿಯ ವಿರುದ್ಧ ಇನ್ನೊಂದು ಹೊಸ ಪ್ರಕರಣ ದಾಖಲಾಗಿದೆ. ತಾನು ಇಸ್ರೋದ ಅಧಿಕಾರಿಯಾಗಿದ್ದೇನೆಂದು ಹೇಳಿ ಆರೋಪಿ ಶ್ರುತಿ ನನ್ನನ್ನು ಮದುವೆ ಯಾಗುವುದಾಗಿ ನಂಬಿಸಿ, ಆ ಹೆಸರಲ್ಲಿ ಮೊದಲು ನನ್ನಿಂದ 14000 ರೂ. ಪಡೆದುಕೊಂಡಳು. ಅದಾದ ಬಳಿಕ ಮಾರ್ಚ್ 31ರಂದು ನಕಲಿ ಫೋಟೋ ಮತ್ತು  ವೀಡಿಯೋವನ್ನು ತೋರಿಸಿ ಮತ್ತೆ ಐವತ್ತು ಸಾವಿರ ರೂ. ಕೇಳಿ ಪಡೆದು ಕೊಂಡಳೆಂದೂ, ಅನಂತರ ಎಪ್ರಿಲ್ 29ರಂದು ಆಕೆ ಮತ್ತೆ ಐವತ್ತು ಸಾವಿರ ರೂ. ಪಡೆದ ಬಳಿಕ ವಂಚಿಸಿರುವುದಾಗಿ ಮೇಲ್ಪರಂಬ ಪೊಲೀಸರಿಗೆ ನೀಡಿದ ದೂರಿನಲ್ಲಿ ಆ ಯುವಕ ಆರೋಪಿಸಿದ್ದಾನೆ. ಅದಕ್ಕೆ ಸಂಬಂಧಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದರ ಹೊರತಾಗಿ ಕಾಸರಗೋಡು ನಗರದ ಲ್ಯಾಬ್ ಒಂದರ ಸಿಬ್ಬಂದಿ ಉದು ಮದ 42 ವರ್ಷದ ಯುವಕನೋರ್ವ ನೀಡಿದ ದೂರಿನಂತೆ, ಕಾಸರಗೋಡು ಪೊಲೀಸ್ ಠಾಣೆಯಲ್ಲೂ ಶ್ರುತಿ ವಿರುದ್ಧ ಇನ್ನೊಂದು ಪ್ರಕರಣ ದಾಖಲುಗೊಂಡಿದೆ. ನಾನು ಅದಾಯ ತೆರಿಗೆ ಇಲಾಖೆಯ ಅಧಿಕಾರಿಯಾಗಿರುವುದಾಗಿ ನಂಬಿಸಿ 2019೯ರಿಂದ 2021ರ ಅವಧಿಯಲ್ಲಿ ಶ್ರುತಿ ಹಲವು ಬಾರಿಯಾಗಿ ತನ್ನ ಬ್ಯಾಂಕ್ ಖಾತೆ ಮೂಲಕ ಆಕೆ 73000 ರೂ. ಪಡೆದುಕೊಂಡಿದ್ದಳು. ಇದರ ಹೊರತಾಗಿ ಬ್ಯಾಂಕ್‌ನಲ್ಲಿ ಅಡವಿರಿಸಲು 83.81 ಗ್ರಾಂ ಚಿನ್ನ ಪಡೆದು ಅದನ್ನೂ ಹಿಂತಿರುಗಿಸದೆ ವಂಚಿಸಿರುವುದಾಗಿ ಆ ಯುವಕ ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋ ಪಿಸಿದ್ದಾರೆ. ಅದರಂತೆ ಕಾಸರಗೋಡು ಪೊಲೀಸರು ಶ್ರುತಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ನಾನು ಫೆಡರಲ್ ಬ್ಯಾಂಕ್‌ನ ಮ್ಯಾನೇಜರ್ ಆಗಿರುವುದಾಗಿ ನಂಬಿಸಿ ಶ್ರುತಿ ತನ್ನಿಂದ  1,23,750 ರೂ. ಪಡೆದು ವಂಚಿಸಿರುವುದಾಗಿ ಕೊಲ್ಲಂ ಕರುನಾಗ ಪಳ್ಳಿಯ 33ರ ಹರೆಯದ ಯುವತಿ ಯೋರ್ವೆ ಕೊಲ್ಲಂ ಈಸ್ಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಅದರಂತೆ ಅಲ್ಲಿನ ಪೊಲೀಸರೂ ಶ್ರುತಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕೊಲ್ಲಂನ ಆಶ್ರಮಂ ಕೈಲಾಸ್ ಮಹಿಳಾ ಹಾಸ್ಟೆಲ್‌ನಲ್ಲಿ ಶ್ರುತಿ ಈ ಹಿಂದೆ ನನ್ನ ಜತೆ ವಾಸಿಸಿದ್ದಳು. ಆಗ ತಂದೆ ಓರ್ವ ಕಿಡ್ನಿ ರೋಗಿಯಾಗಿದ್ದು, ಅವರನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಅವರ ಚಿಕಿತ್ಸೆ ಹೆಸರಲ್ಲಿ ಶ್ರುತಿ ತನ್ನಿಂದ ಈ ಹಣ ಪಡೆದುಕೊಂಡಿದ್ದಾಳೆಂದು ಕೊಲ್ಲಂನ ಯುವತಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ.

ಹೀಗೆ ಕಾಸರಗೋಡು, ಮೇಲ್ಪರಂಬ ಮತ್ತು ಕೊಲ್ಲಂ ಈಸ್ಟ್ ಪೊಲೀಸ್ ಠಾಣೆಗಳಲ್ಲಾಗಿ ಶ್ರುತಿ ವಿರುದ್ಧ ಈಗ  ಮೂರು ಹೊಸ ಪ್ರಕರಣಗಳು ದಾಖಲಾಗಿವೆ. ಈ ಹಿಂದೆ ಪೊಯಿನಾಚಿ ನಿವಾಸಿಯಾಗಿರುವ ಯುವಕನೋರ್ವ ನೀಡಿದ ದೂರಿನಂತೆ ಮೇಲ್ಪರಂಬ ಪೊಲೀಸರು ಶ್ರುತಿಯನ್ನು ಕಳೆದ ಜುಲೈ 26ರಂದು ಉಡುಪಿಯಿಂದ ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದರು. ಬಳಿಕ ಆಕೆಯನ್ನು ನ್ಯಾಯಾಂಗ ಬಂಧನದಲ್ಲಿರಿಸಲಾಗಿತ್ತು. ಅದಾದ ಬೆನ್ನಲ್ಲೇ ಆಕೆಯ ವಿರುದ್ಧ ಈ ಮೂರು ಹೊಸ ಪ್ರಕರಣಗಳು ದಾಖಲುಗೊಂಡಿವೆ.

Leave a Reply

Your email address will not be published. Required fields are marked *

You cannot copy content of this page