೨೧ ಲಕ್ಷ ಟಿನ್ ಅರವಣ ಪ್ರಸಾದ ದಾಸ್ತಾನು
ಶಬರಿಮಲೆ: ಶಬರಿಮಲೆ ತೀರ್ಥಾಟನಾ ಋತು ಆರಂಭಗೊಂ ಡಿರುವಂತೆಯೇ ೨೧ ಲಕ್ಷ ಟಿನ್ ಅರವಣ ಪಾಯಸ ಪ್ರಸಾದ ಹಾಗೂ ೩.೨೫ ಲಕ್ಷ ಅಪ್ಪ ಪ್ರಸಾದವನ್ನು ಈಗಾಗಲೇ ತಯಾರಿಸಿ ದಾಸ್ತಾನಿರಿ ಸಲಾಗಿದೆಯೆಂದು ಮುಜರಾಯಿ ಮಂಡಳಿ ತಿಳಿಸಿದೆ.
ಇದರ ಹೊರತಾಗಿ ಪ್ರತಿದಿನ ಒಂಟು ಲಕ್ಷಟಿನ್‌ನಂತೆ ಅರವಣ ಪಾಯಸ ಉತ್ಪಾದಿಸಲಾಗುತ್ತಿದೆ. ತೀರ್ಥಾಟನಾ ಋತು ನವಂಬರ್ ೧೭ರಿಂದ ಆರಂಭಗೊಂಡಿರುವಂ ತೆಯೇ ಅಂದಿನಿಂದಲೇ ತುಪ್ಪಾಭಿಷೇಕ ಸೇವೆಗೂ ಚಾಲನೆ ನೀಡಲಾಗಿದೆ. ದೈನಂದಿನ ರಾತ್ರಿ ೧೧ ಗಂಟೆ ತನಕ ಈ ಸೇವೆ ನಡೆಯಲಿದೆ. ಶಬರಿಮಲೆಗೆ ಈ ಬಾರಿ ಹರಿದು ಬರುತ್ತಿರುವ ಭಕ್ತರ ಸಂಖ್ಯೆ ಕಳೆದ ವರ್ಷಕ್ಕಿಂತಲೂ ಈ ಸಲ ಹೆಚ್ಚಾ ಗುತ್ತಿರುವ ಹಿನ್ನೆಲೆಯಲ್ಲಿ ಉದಯಾ ಸ್ತಮಾನ ಪೂಜೆ ಮತ್ತು ಮೆಟ್ಟಿಲು (ಪಡಿ) ಪೂಜೆಯನ್ನು ತಾತ್ಕಾಲಿ ಕವಾಗಿ ನಿಲುಗಡೆಗೊಳಿಸಲಾಗಿದೆ.