ಮಂಗಲ್ಪಾಡಿ ಪಂ. ಮಾಜಿ ಉಪಾಧ್ಯಕ್ಷ ನಿಧನ

0
66

 

ಉಪ್ಪಳ: ಮಂಗಲ್ಪಾಡಿ ಪಂಚಾಯತ್ ಮಾಜಿ ಉಪಾಧ್ಯಕ್ಷರೂ, ಬಪ್ಪಾಯಿತೊಟ್ಟಿ ನಿವಾಸಿಯಾದ ಬಿ.ಎಸ್. ಅಬ್ದುಲ್ ರಹಿಮಾನ್ ಸಾಹೀಬ್ (೮೬) ನಿನ್ನೆ   ನಿಧನಹೊಂದಿದರು. ಅಲ್ಪಕಾಲದಿಂದ ಅಸೌಖ್ಯದಿಂದಿದ್ದರು. ಮುಸ್ಲಿಂ ಲೀಗ್ ಕಾರ್ಯಕರ್ತನಾದ ಇವರು ೧೯೯೫ರಿಂದ ೨೦೦೦ದವರೆಗೆ ಮಂ ಗಲ್ಪಾಡಿ ಪಂಚಾಯತ್‌ನ ಉಪಾಧ್ಯ ಕ್ಷರಾಗಿದ್ದರು.  ಹನಫಿ ಬಜಾರ್‌ನಲ್ಲಿ ರುವ ಹನಫಿ ಜಾಮಿಯಾ ಮಸೀದಿಯಲ್ಲಿ ಹಲವು ವರ್ಷ  ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.

ಮೃತರು ಪತ್ನಿ ಶೇರಾಬಾನು, ಮಕ್ಕಳಾದ ಅಬೂಬಕರ್, ಇಫ್ತಿಕಾರ್, ಅಜೀಂ, ಸುಹೈಬ್, ಶೈನಾಜ್‌ಬಾನು, ಶಾಹಿದಾಬಾನು, ಶೆಹರಿನ್‌ಬಾನು, ಸಹೋದರ ಮೊಹಮ್ಮದ್ ಇಸ್ಮಾಯಿಲ್, ಸಹೋದರಿ ಆಯಿಷಾ, ಅಳಿಯ-ಸೊಸೆಯಂದಿರ ಸಹಿತ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಮೃತರ ಮನೆಗೆ ಪಂಚಾಯತ್ ಅಧ್ಯಕ್ಷ ಶಾಹುಲ್ ಹಮೀದ್, ಲೀಗ್ ನೇತಾರರಾದ ಎಂ.ಸಿ. ಖಮರುದ್ದೀನ್, ಟಿ.ಎ. ಮೂಸಾ ಸಹಿತ ಹಲವರು ಭೇಟಿ ನೀಡಿ ಸಂತಾಪ ಸೂಚಿಸಿದರು.

NO COMMENTS

LEAVE A REPLY