ಮಂಗಲ್ಪಾಡಿ ಪಂ. ಮಟ್ಟದ ಬೃಹತ್ ಹಿಂದೂ ಸಮಾಜೋತ್ಸವ

ಉಪ್ಪಳ: ಮಂಗಲ್ಪಾಡಿ ಪಂಚಾಯತ್ ಮಟ್ಟದ ಬೃಹತ್ ಹಿಂದೂ ಸಮಾಜೋತ್ಸವ ನಿನ್ನೆ ಸಂಜೆ ಪ್ರತಾಪನಗರದ ಶಿವಶಕ್ತಿ ಮೈದಾನದಲ್ಲಿ ಸಾವಿವಾರು ಮಂದಿಯ ಉಪಸ್ಥಿತಿಯಲ್ಲಿ ಅದ್ದೂರಿಯಾಗಿ ನಡೆಯಿತು. ಮಂಗಲ್ಪಾಡಿ ಮನೆತನದ ಹಿರಿಯರಾದ ಸುಫಲಚಂದ್ರ ನಾಯಕ್ ಅಧ್ಯಕ್ಷತೆ ವಹಿಸಿದ ಕಾರ್ಯಕ್ರಮದಲ್ಲಿ ಸಮಿತಿಯ ರಕ್ಷಾಧಿಕಾರಿ ಕೊಂಡೆವೂರು ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರು ಆಶೀರ್ವಚನ ನೀಡಿದರು. ಕರ್ನಾಟಕ ರಾಜ್ಯ ದೇವಾಲಯ ಸಂವರ್ಧನಾ ಸಮಿತಿ ಸಂಯೋಜಕ್ ಮನೋಹರ ಮಠದ್ ದಿಕ್ಸೂಚಿ ಭಾಷಣ ಮಾಡಿದರು. ಸಮಿತಿ ಅಧ್ಯಕ್ಷ ಸಿ.ಎಸ್.ಕೃಷ್ಣಪ್ಪ ಐಲ್ ಉಪಸ್ಥಿತರಿದ್ದರು. ಆರ್.ಎಸ್.ಎಸ್ ಮಂಡಲ ಕಾರ್ಯವಾಹ ಶ್ರೀಧರ ಶೆಟ್ಟಿ ಪರಂಕಿಲ ಪ್ರಾಸ್ತಾವಿಕ ಭಾಷಣ ಮಾಡಿದರು. ಚೈತನ್ಯ, ಅನನ್ಯ, ಯಶಸ್ವಿ ವಂದೇ ಮಾತರಂ ಹಾಡಿದರು. ಅಮಿತ್ ಪರಂಕಿಲ ಸ್ವಾಗತಿಸಿದರು. ಪದ್ಮಾ ಮೋಹನದಾಸ್ ನಿರೂಪಿಸಿದರು. ಸಮಿತಿ ಉಪಾಧ್ಯಕ್ಷ ರಾಧಾಕೃಷ್ಣ ತುಂಗ ವಂದಿಸಿದರು. ಸಾಂಸ್ಕöÈತಿಕ ಕಾರ್ಯಕ್ರಮದಂಗವಾಗಿ ವೇದಿಕೆಯಲ್ಲಿ ಮಂಜುಳಾ ಗುರುರಾಜ್ ಮಯ್ಯ ಮತ್ತು ಬಳಗದವರಿಂದ ರಾಷ್ಟç ಭಕ್ತಿಗೀತೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಆರಂಭದಲ್ಲಿ ಶಾಂತಿಗುರಿ ಶ್ರೀ ಮೂಕಾಂಭಿಕ ಕ್ಷೇತ್ರದಿಂದ ವಿವಿಧ ತಂಡದ ಕುಣಿತ ಭಜನೆಯೊಂದಿಗೆ ವೈಭವ ಶೋಭಾಯಾತ್ರೆ ನಡೆಯಿತು.

RELATED NEWS

You cannot copy contents of this page