ತಲೆಹೊರೆ ಕಾರ್ಮಿಕರನ್ನು ದ್ರೋಹಿಸುವ ನೀತಿಯನ್ನು ಸರಕಾರ ಕೈಬಿಡಬೇಕು-ಬಿ.ಎಂ.ಎಸ್

ಕಾಸರಗೋಡು: ಕೇರಳದಲ್ಲಿ ಲಕ್ಷಾಂತರ ತಲೆಹೊರೆ ಕಾರ್ಮಿಕರನ್ನು ದ್ರೋಹಿಸುವ ನೀತಿಯನ್ನು ರಾಜ್ಯ ಸರಕಾರ ಕೈಗೊಳ್ಳುತ್ತಿದೆ. ೨೬ ಎ ಕಾರ್ಡ್‌ಗಳಿರುವ ಕಾರ್ಮಿಕರು ನಡೆಸಬೇಕಾದ ಕೆಲಸಗಳನ್ನು ಅನ್ಯರಾಜ್ಯ ಕಾರ್ಮಿಕರು ಕಡಿಮೆ ವೇತನಕ್ಕೆ ನಡೆಸುವುದರಿಂದ ಇಲ್ಲಿನ ಕಾರ್ಮಿಕರಿಗೆ ಕೆಲಸವಿಲ್ಲದ ಸ್ಥಿತಿ ಉಂಟಾಗಿದೆ. ಇದಕ್ಕೆ ಪರಿಹಾರ ಕಂಡುಕೊಳ್ಳಲು ಹಲವು ವರ್ಷಗಳಿಂದ ಕೇರಳವನ್ನಾಳುವ ಎಡರಂಗ ಸರಕಾರಕ್ಕೆ ಸಾಧ್ಯವಾಗಲಿಲ್ಲ. ಇನ್ನಾದರೂ ಈ ವಿಷಯದಲ್ಲಿ ಕ್ರಮ ಕೈಗೊಳ್ಳಲು ಸರಕಾರ ಮುಂದಾಗಬೇ ಕೆಂದು ಹೆಡ್‌ಲೋಡ್ ಆಂಡ್ ಜನರಲ್ ಮಜ್ದೂರ್ ಸಂಘ್ (ಬಿಎಂಎಸ್) ಜಿಲ್ಲಾ ಸಮ್ಮೇಳನ ಒತ್ತಾಯಿಸಿದೆ.

ಹೆಡ್‌ಲೋಡ್ ಆಂಡ್ ಜನರಲ್ ಮಜ್ದೂರ್ ಸಂಘದ ಜಿಲ್ಲಾಧ್ಯಕ್ಷ ಕೆ.ವಿ. ಬಾಬು ಅವರ ಅಧ್ಯಕ್ಷತೆಯಲ್ಲಿ ನಡೆದ ಸಮ್ಮೇಳನವನ್ನು ಬಿಎಂಎಸ್ ರಾಜ್ಯ ಕೋಶಾಧಿಕಾರಿ ಸಿ. ಬಾಲಚಂದ್ರನ್ ಪಾಲಕ್ಕಾಡ್ ಉದ್ಘಾಟಿಸಿದರು. ಬಿಎಂಎಸ್ ಜಿಲ್ಲಾ ಜತೆ ಕಾರ್ಯದರ್ಶಿ ಲೀಲಾಕೃಷ್ಣನ್ ಮುಳ್ಳೇರಿಯ, ಗುರುದಾಸ್ ಚೇನೆಕ್ಕೋಡು, ಪ್ರದೀಪ್ ಕೇಳೋತ್, ಹರೀಶ್ ಕುದ್ರೆಪ್ಪಾಡಿ ಶುಭಾಶಂ ಸನೆಗೈದರು. ಬಿಎಂಎಸ್ ರಾಜ್ಯ ಸಮಿತಿ ಸದಸ್ಯ ವಿ.ಬಿ. ಸತ್ಯನಾಥ್ ಸಮಾರೋಪ ಭಾಷಣ ಮಾಡಿದರು. ಹೆಡ್‌ಲೋಡ್ ಜನರಲ್ ಮಜ್ದೂರ್ ಸಂಘ್ ಜಿಲ್ಲಾ ಪದಾಧಿಕಾರಿಗಳಾದ ಭಾಸ್ಕರನ್ ಚೆಂಬಿಲೋಟ್, ಅನೀಶ್ ಮಡಿಕೈ, ಜಿತಿನ್‌ಬಾಬು ನೀಲೇಶ್ವರ, ಲೋಕೇಶ್ ಕಾಸರಗೋಡು, ಉಮೇಶ್ ಮಾನ್ಯ, ಸೂರ್ಯನಾರಾಯಣ ಕುಬಣೂರು,  ಕುಂಞಿಕೃಷ್ಣನ್ ಮಾವುಂಗಾಲ್ ಮಾತನಾಡಿದರು.

ಜಿಲ್ಲಾ ಕೋಶಾಧಿಕಾರಿ ದಿಲೀಪ್ ಡಿ’ಸೋಜ ಆಯ-ವ್ಯಯ ಲೆಕ್ಕ ಮಂಡಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ್ ಬಂಬ್ರಾಣ ಸ್ವಾಗತಿಸಿ, ರವಿ ವೈ ಬದಿಯಡ್ಕ ವಂದಿಸಿದರು. ೨೦೨೫-೨೬ನೇ ಸಾವಿನ ಪದಾಧಿಕಾರಿಗಳಾಗಿ ಕೆ.ವಿ. ಬಾಬು (ಅಧ್ಯಕ್ಷ), ಪಿ. ದಿನೇಶ್ ಬಂಬ್ರಾಣ (ಪ್ರಧಾನ ಕಾರ್ಯದರ್ಶಿ), ದಿಲೀಪ್ ಡಿ’ಸೋಜಾ (ಕೋಶಾ ಧಿಕಾರಿ), ಸದಾಶಿವ ಮುಳ್ಳೇರಿಯ, ಭಾಸ್ಕರ ಚೆಂಬಿಲೋಟ್, ಉಮೇಶ್ ಮಾನ್ಯ, ರವಿ ಬದಿಯಡ್ಕ, ತಂಗಪ್ಪನ್ ಪಾಣತ್ತೂರು(ಉಪಾಧ್ಯಕ್ಷ), ಅನೀಶ್ ಪರಕ್ಕಳಾಯಿ, ರಂಜಿತ್ ಕಾಸರಗೋಡು, ಸೂರ್ಯನಾ ರಾಯಣ ಕುಬಣೂರ, ಭಾಸ್ಕರ ಪೊಯಿನಾಚಿ, ಜಿತಿನ್ ಬಾಬು ನೀಲೇಶ್ವರ(ಜತೆ ಕಾರ್ಯದರ್ಶಿಗಳು) ಹಾಗೂ ಇತರ ಒಂಭತ್ತು ಮಂದಿಯ ಸಮಿತಿ ರೂಪೀಕರಿಸಲಾಯಿತು.

RELATED NEWS

You cannot copy contents of this page