ಅಬಕಾರಿ ಪ್ರಕರಣ: ಆರೋಪಿಗೆ ಸಜೆ, ಜುಲ್ಮಾನೆ

0
33

ಕಾಸರಗೋಡು: ಅಕ್ರಮವಾಗಿ ವಿದೇಶ ಮದ್ಯ ಕೈವಶವಿರಿಸಿಕೊಂಡ ಪ್ರಕರಣದ ಆರೋಪಿಗೆ ಕಾಸರಗೋ ಡು ಅಸಿಸ್ಟೆಂಟ್ ಸೆಶನ್ಸ್ ನ್ಯಾಯಾಲ ಯ ೧೮ ತಿಂಗಳ ಸಜೆ ಮತ್ತು ೧ ಲಕ್ಷ ರೂ. ಜುಲ್ಮಾನೆ ವಿಧಿಸಿ ತೀರ್ಪು ನೀಡಿದೆ.

ಕರಿಬೇಡಗಂ ಪಡಿಪ್ಪು ನಿವಾಸಿ ರಾಮಚಂದ್ರನ್ ಕೆ.(೪೪) ಎಂಬಾತನಿಗೆ ಈ ಶಿಕ್ಷೆ ವಿಧಿಸಲಾಗಿ ದೆ. ಜುಲ್ಮಾನೆ ಪಾವತಿಸದಿದ್ದಲ್ಲಿ ಆರೋಪಿ ಎರಡು ತಿಂಗಳ ಹೆಚ್ಚುವರಿ ಸಜೆ ಅನುಭವಿಸ ಬೇಕಾಗಿದೆ ಎಂದೂ ತೀರ್ಪಿನಲ್ಲಿ ತಿಳಿಸಲಾಗಿದೆ.  ೨೦೧೮ ಮಾರ್ಚ್ ೯ರಂದು ಕುತ್ತಿಕ್ಕೋಲ್ ವೆಟರ್ನರಿ ಸಬ್ ಸೆಂಟರ್ ಬಳಿ ಬಂದಡ್ಕ ರೇಂ ಜ್‌ನ ಅಬಕಾರಿ ತಂಡ ನಡೆಸಿದ ಕಾರ್ಯಾ ಚರಣೆಯಲ್ಲಿ ೩೭೫ ಎಂ. ಎಲ್‌ನ ಒಂಭತ್ತು ಬಾಟಲಿ ವಿದೇಶ ಮದ್ಯದೊಂದಿಗೆ ರಾಮಚಂದ್ರನ್ ನನ್ನು ಬಂಧಿಸಿ ಕೇಸು ದಾಖಲಿಸಿಕೊಂ ಡಿದ್ದರು. ಆ ಪ್ರಕರಣದಲ್ಲಿ ಆತನಿಗೆ ಈ ಶಿಕ್ಷೆ ವಿದಿಸಲಾಗಿದೆ.

NO COMMENTS

LEAVE A REPLY