ಸಿಎಎ-ಎನ್‌ಆರ್‌ಸಿ: ವಿಪಕ್ಷಗಳ ಮಧ್ಯೆ ಒಡಕು

0
23

ಹೊಸದಿಲ್ಲಿ: ಪೌರತ್ವ ತಿದ್ದುಪಡಿ ಕಾನೂನು (ಸಿಎಎ) ಮತ್ತು ರಾಷ್ಟ್ರೀಯ ಪೌರತ್ವ ದಾಖಲಾತಿ (ಎನ್‌ಆರ್‌ಸಿ) ವಿಷಯದ ಬಗ್ಗೆ ಚರ್ಚಿಸಲು ಕಾಂಗ್ರೆಸ್ ನೇತೃತ್ವದಲ್ಲಿ  ದಿಲ್ಲಿಯಲ್ಲಿ ಇಂದು ಕರೆಯಲಾದ ಸರ್ವಪಕ್ಷ ಸಭೆಯಲ್ಲಿ ಹಾಜರಾಗದೆ ಬಿಟ್ಟು ನಿಲ್ಲಲು ತೃಣಮೂಲ ಕಾಂಗ್ರೆಸ್, ಬಹುಜನ್ ಸಮಾಜವಾದಿ ಪಾರ್ಟಿ ಮತ್ತು ಆಮ್ ಆದ್ಮಿ ಪಾರ್ಟಿ ತೀರ್ಮಾನಿಸಿದೆ.

ಇದು ಸಿಎಎ ಮತ್ತು ಎನ್‌ಆರ್‌ಸಿ ವಿಷಯದಲ್ಲಿ ವಿಪಕ್ಷಗಳನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಿ ಕೇಂದ್ರ ಸರಕಾರದ ವಿರುದ್ಧ  ಹೋರಾಟ ನಡೆಸಲು ಕಾಂಗ್ರೆಸ್ ಮಾಡಿದ ರಣತಂತ್ರಕ್ಕೆ ತಿರುಗೇಟಾಗಿ ಪರಿಣ ಮಿಸಿದೆ.  ಸರ್ವಪಕ್ಷ ಸಭೆ ನಡೆಸುವ ಮೂಲಕ ಸಿಎಎ ಮತ್ತು ಎನ್‌ಆರ್‌ಸಿ ವಿಷಯದಲ್ಲಿ ನಡೆಸಲಾಗುತ್ತಿರುವ ಹೋರಾಟದ ಈ ಪ್ರಯೋಜನವನ್ನು  ಪೂರ್ಣವಾಗಿ ಪಡೆಯಲು  ಕಾಂಗ್ರೆಸ್ ಯತ್ನಿಸುತ್ತಿದೆ. ಅದಕ್ಕೆ ಅವಕಾಶ ನೀಡಲಾಗುವುದಿಲ್ಲ. ಅದರಿಂದಾಗಿ ಈ ಸಭೆಯಲ್ಲಿ ನಾವು ಭಾಗವಹಿ ಸುವುದಿಲ್ಲವೆಂದು ಪ. ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೆಜ್ರಿವಾಲ್ ಮತ್ತು ಬಿಎಸ್‌ಪಿ ನಾಯಕಿ ಮಾಯಾವತಿ ಸ್ಪಷ್ಟಪಡಿಸಿದ್ದಾರೆ.

ಪೌರತ್ವ ತಿದ್ದುಪಡಿ ಕಾಯ್ದೆ ವಿಷಯದಲ್ಲಿ ಕಾಂಗ್ರೆಸ್ ಮತ್ತು ವಾಮ ಪಕ್ಷಗಳು ಡಬಲ್ ಗೇಮ್ ಆಡುತ್ತಿದೆ. ಅದನ್ನು ಅಂಗೀಕರಿಸುವಂತಿಲ್ಲ. ಅದರಿಂದಾಗಿ ಕಾಂಗ್ರೆಸ್ ನೇತೃತ್ವದಲ್ಲಿ ದಿಲ್ಲಿಯಲ್ಲಿ ಇಂದು ಕರೆಯಲಾದ ಸರ್ವಪಕ್ಷ  ಸಭೆಯಲ್ಲಿ  ನಮ್ಮ ಪಕ್ಷ ಭಾಗವಹಿಸದೆ  ಬಹಿಷ್ಕರಿಸುವುದಾಗಿ ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ.

ಇದರಿಂದಾಗಿ ಸಿಎಎ ಮತ್ತು ಎನ್ ಆರ್‌ಸಿ ವಿಷಯದಲ್ಲಿ ಬಿಜೆಪಿ ವಿರುದ್ಧ ಎಲ್ಲಾ ವಿಪಕ್ಷಗಳನ್ನು ಒಗ್ಗೂಡಿಸುವ ಕಾಂಗ್ರೆಸ್‌ನ ಪ್ರಯತ್ನಕ್ಕೆ ಭಾರೀ ಹಿನ್ನಡೆ   ಉಂಟಾಗುವಂತೆ ಮಾಡಿದೆ. ಫೆಬ್ರವರಿ ಯಲ್ಲಿ ದಿಲ್ಲಿ ವಿಧಾನಸಭೆಗೆ ಚುನಾವಣೆ ನಡೆಯಲಿದ್ದು, ಪೌರತ್ವ ತಿದ್ದುಪಡಿ ಕಾಯ್ದೆ ವಿಷಯದಲ್ಲಿ ಕಾಂಗ್ರೆಸ್ ಜತೆ ಕೈ ಜೋಡಿಸಿದ್ದಲ್ಲಿ ಅದು ಚುನಾವಣೆ ಯಲ್ಲಿ ತಮ್ಮ ಪಕ್ಷಕ್ಕೆ ಪ್ರತಿಕೂಲವಾಗಿ ಪರಿಣಮಿಸಬಹುದೆಂದು ಆಮ್ ಆದ್ಮಿ ಪಾರ್ಟಿ  ತಿಳಿಸಿದೆ.

NO COMMENTS

LEAVE A REPLY