ಮರದಿಂದ ಬಿದ್ದು ಗಾಯಗೊಂಡ ಕೃಷಿಕ ಮೃತ್ಯು

0
217

ಉಪ್ಪಳ: ಮರದಿಂದ ಬಿದ್ದು ಗಂಭೀರ ಗಾಯಗೊಂಡಿದ್ದ ಕೃಷಿಕ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಸಂಭವಿಸಿದೆ. ಮೀಂಜ ಕಳ್ಳಿಗೆ ನಿವಾಸಿ ಬಾಬು ರೈ ಎಂಬವರ ಪುತ್ರ ಪ್ರಸಾದ್ ರೈ(೪೦) ಮೃತ ವ್ಯಕ್ತಿ. ಕಳೆದ ದ. ೨೫ರಂದು ಮನೆ ಬಳಿಯ ಮರದಿಂದ ಬಿದ್ದು ಪ್ರಸಾದ್ ರೈ ಗಂಭೀರ ಗಾಯಗೊಂಡಿದ್ದರು. ದೇರಳಕಟ್ಟೆ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಿದರೂ ಜೀವ ರಕ್ಷಿಸಲಾಗಲಿಲ್ಲ.

ಮೃತರು ತಂದೆ, ತಾಯಿ ಗುಲಾಬಿ, ಪತ್ನಿ ಸುಪ್ರೀತ, ಮಕ್ಕಳಾದ ವಿಶಿತ್, ವಿನಿತ್, ಸಹೋದರಿ ಪ್ರೇಮಲತ ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ. ಘಟನೆ ಬಗ್ಗೆ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

NO COMMENTS

LEAVE A REPLY