ಕುಂಬ್ಡಾಜೆ: ಮೊಮ್ಮಗುವನ್ನು ಶಾಲೆಗೆ ಕರೆದೊಯ್ದ ಬಳಿಕ ನಾಪತ್ತೆಯಾದ ಮಹಿಳೆಯನ್ನು ಬಸ್ ತಂಗುದಾಣದಲ್ಲಿ ಅಸ್ವಸ್ಥ ಸ್ಥಿತಿಯಲ್ಲಿ ಪತ್ತೆಹಚ್ಚಲಾಗಿದೆ. ಕುಂಬ್ಡಾಜೆ, ಚಂದ್ರಂಪಾರೆ ನಿವಾಸಿಯಾದ ೫೪ರ ಹರೆಯದ ಮಹಿಳೆಯನ್ನು ಇಂದು ಮುಂಜಾನೆ ಮಲ್ಲಂಪಳ್ಳಿ ಸಮೀಪದ ಬಸ್ ತಂಗುದಾಣದಲ್ಲಿ ಪತ್ತೆಹಚ್ಚಲಾಗಿದೆ. ಇವರನ್ನು ಆಸ್ಪತ್ರೆಯಲ್ಲಿ ದಾಖ ಲಿಸಲಾಗಿದೆ. ಕಳೆದ ಎರಡು ವಾರಗಳಿಂದ ಈ ಮಹಿಳೆ ಅಮ್ಮಂಗೋಡಿನ ಪುತ್ರಿಯ ಮನೆಯಲ್ಲಿ ವಾಸವಾಗಿದ್ದರು. ನಿನ್ನೆ ಬೆಳಿಗ್ಗೆ ಪುತ್ರಿಯ ಮಗುವನ್ನು ಪೊವ್ವಲ್ ಶಾಲೆಗೆ ಕರೆದುಕೊಂಡು ಹೋಗಿದ್ದರು. ಆ ಬಳಿಕ ಇವರು ಹಿಂತಿರುಗಿರಲಿಲ್ಲ. ಸಂಜೆವರೆಗೂ ಹುಡುಕಾಡಿ ಪತ್ತೆಹಚ್ಚಲು ಸಾಧ್ಯವಾಗದ ಹಿನ್ನೆಲೆಯಲ್ಲಿ …
Read more “ಮೊಮ್ಮಗುವನ್ನು ಶಾಲೆಗೆ ಕರೆದುಕೊಂಡು ಹೋದ ಮಹಿಳೆ ಅಸ್ವಸ್ಥ ಸ್ಥಿತಿಯಲ್ಲಿ ಬಸ್ ತಂಗುದಾಣದಲ್ಲಿ ಪತ್ತೆ”
ಕಾಸರಗೋಡು: ವಿದ್ಯಾನಗರದಲ್ಲಿ ಕಾರ್ಯವೆಸಗುತ್ತಿರುವ ವರ್ಕ್ ಶಾಪ್ಗೆ ಕಳ್ಳರು ನುಗ್ಗಿ ಸುಮಾರು 75,000 ರೂ. ಬೆಲೆಯ ಎಂ.ಎಸ್ ಬೋಲ್ಡ್ ಮತ್ತು ಎಲ್ಪಿ ಕಂಪೆನಿಯ ಗ್ಯಾಸ್ ಸಿಲಿಂಡರ್ಗಳನ್ನು ಕಳವುಗೈದಿರುವುದಾಗಿ ಕಾಸರಗೋಡು ಪೊಲೀಸರಿಗೆ ದೂರು ನೀಡಲಾಗಿದೆ. ಪ್ರಸ್ತುತ ವರ್ಕ್ ಶಾಪ್ ಸಿಬ್ಬಂದಿ ನೀಲೇಶ್ವರ ಕರುವಾಂಚೇರಿ ನಿವಾಸಿ ಪ್ರಯಾಗ್ ವಿ.ವಿ ಈ ಬಗ್ಗೆ ದೂರು ನೀಡಿದ್ದು, ಅದರಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಜೂನ್ 8 ಮತ್ತು 9ರ ನಡುವೆ ಈ ಕಳವು ನಡೆದಿದೆ.
ಕಾಸರಗೋಡು: ಹತ್ತನೇ ತರಗತಿ ವಿದ್ಯಾರ್ಥಿನಿ ಬೆಡ್ರೂಂನಲ್ಲಿ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಬಂದಡ್ಕ ಗ್ರಾಮೀಣ ಬ್ಯಾಂಕ್ ಸಮೀಪದಲ್ಲಿ ಕ್ಯಾಂಟೀನ್ ನಡೆಸುವ ಬೇತಲಂ ಉಂದತ್ತಡ್ಕದ ಸವಿತ ಎಂಬವರ ಪುತ್ರಿ ದೇವಿಕ (16) ಮೃತಪಟ್ಟ ವಿದ್ಯಾರ್ಥಿನಿಯಾಗಿದ್ದಾಳೆ.
ಕಾಸರಗೋಡು: 16ರ ಹರೆಯದ ಬಾಲಕನಿಗೆ ಸಲಿಂಗರತಿ ಕಿರುಕುಳ ನೀಡಿದ ಆರೋಪದಂತೆ ಉನ್ನತರ ಸಹಿತ ಒಂಭತ್ತು ಮಂದಿಯನ್ನು ಪೊಲೀಸರು ಕಸ್ಟಡಿಗೆ ತೆಗೆದಿದ್ದಾರೆ. ಚಂದೇರ ಪೊಲೀಸ್ ಠಾಣೆ ವ್ಯಾಪ್ತಿಯ ೮ ಮಂದಿ ಸಹಿತ 14 ಮಂದಿ ವಿರುದ್ಧ
ಬದಿಯಡ್ಕ: ಪೋಕ್ಸೋ ಪ್ರಕರಣದಲ್ಲಿ ಆರೋಪಿಯಾಗಿ ಸೆರೆಗೀಡಾದ ಬಳಿಕ ಜಾಮೀನಿನಲ್ಲಿ ಬಿಡುಗಡೆಗೊಂಡು ತಲೆಮರೆಸಿಕೊಂಡ ಆರೋಪಿ ಸೆರೆಗೀಡಾಗಿದ್ದಾನೆ. ನಾರಂಪಾಡಿ ನಿವಾಸಿಯಾದ ಅಬ್ದುಲ್ ರಸಾಕ್ (35) ಎಂಬಾತನನ್ನು ಬದಿಯಡ್ಕ ಎಎಸ್ಐ ಮುಹಮ್ಮದ್ ನೇತೃತ್ವದ ಪೊಲೀಸ್ ತಂಡ ಅಜ್ಮೀರ್ನಿಂದ ಸೆರೆಹಿಡಿದಿದೆ.
ಕಾಸರಗೋಡು: ಯುವತಿ ಯೋರ್ವೆ ಮನೆಯೊಳಗೆ ಕಿಚ್ಚಿರಿಸಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ನಡೆದಿದೆ. ಹೊಸದುರ್ಗಕ್ಕೆ ಸಮೀಪದ ಕರಿಂದಳ ಪುಲಿಯನ್ನೂರಿನ ವಿಜಯನ್ ಎಂಬವರ ಪತ್ನಿ ಒ. ಸವಿತ (48) ಸಾವನ್ನಪ್ಪಿದ ಯುವತಿ. ಕಾಂಕ್ರೀಟ್ ಮನೆಯ ಎರಡನೇ
ಕಾಸರಗೋಡು: ಹತ್ತನೇ ತರಗತಿ ವಿದ್ಯಾರ್ಥಿನಿ ಬೆಡ್ರೂಂನಲ್ಲಿ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಬಂದಡ್ಕ ಗ್ರಾಮೀಣ ಬ್ಯಾಂಕ್ ಸಮೀಪದಲ್ಲಿ ಕ್ಯಾಂಟೀನ್ ನಡೆಸುವ ಬೇತಲಂ ಉಂದತ್ತಡ್ಕದ ಸವಿತ ಎಂಬವರ ಪುತ್ರಿ ದೇವಿಕ (16) ಮೃತಪಟ್ಟ ವಿದ್ಯಾರ್ಥಿನಿಯಾಗಿದ್ದಾಳೆ.
ಕೊಚ್ಚಿ: ರಾಜ್ಯದಲ್ಲಿ ಚಿನ್ನದ ಬೆಲೆ ಹೆಚ್ಚುತ್ತಲೇ ಇದೆ. ನಿನ್ನೆ ಅಲ್ಪ ಕುಸಿತ ಕಂಡು ಬಂದ ಬೆಲೆ ಇನ್ನು ಮತ್ತೆ ಇತಿಹಾಸದಲ್ಲೇ ಅತ್ಯಂತ ಹೆಚ್ಚಿನ ದರ ದಾಖಲಿಸಿದೆ. ಇದುವರೆಗಿನ ಸಾರ್ವಕಾಲಿಕ ದಾಖಲೆಗಳನ್ನೆಲ್ಲಾ ಮುರಿದು ಚಿನ್ನದ ಬೆಲೆಯ
ನವದೆಹಲಿ: ಭಾರತದ 15ನೇ ಉಪರಾಷ್ಟ್ರಪತಿಯಾಗಿ ಚಂದ್ರಾಪುರಂ ಪೊನ್ನು ಸ್ವಾಮಿ ರಾಧಾಕೃಷ್ಣನ್ ರಾಷ್ಟ್ರಪತಿ ಭವನದಲ್ಲಿ ಇಂದು ನಡೆದ ಸರಳ ಸಮಾರಂ ಭದಲ್ಲಿ ಪ್ರಮಾಣವಚನ ಸ್ವೀಕರಿಸಿದರು. ರಾಷ್ಟ್ರಪತಿ ದ್ರೌಪದಿ ಮುರ್ಮು ಸಿ.ಪಿ. ರಾಧಾಕೃಷ್ಣನ್ರಿಗೆ ಪ್ರಮಾಣವಚನ ಬೋಧಿಸಿದರು. ಪ್ರಧಾನಮಂತ್ರಿ
ವಾಷಿಂಗ್ಟನ್: ಭಾರತ ಮತ್ತು ಅಮೆರಿಕ ನಡುವಿನ ಸಂಬಂಧದಲ್ಲಿ ಸುಂಕ ಸಮರದ ಹೆಸರಲ್ಲಿ ಉದ್ವಿಗ್ನತೆಯ ವಾತಾವರಣ ನೆಲೆಗೊಂಡಿರುವಂತೆಯೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ಮತ್ತು ಪ್ರಧಾನಿ ಮೋದಿಯ ವರ ಬಗ್ಗೆ ತಳೆದಿದ್ದ ನಿಲುವಿನಿಂದ ಉಲ್ಟಾ
ನಾಳೆ ತಿರುವೋಣಂ. ಓಣಂ ಹಬ್ಬವನ್ನು ಸ್ವಾಗತಿಸಲು ಕೇರಳೀಯರು ಸಿದ್ಧತೆಯಲ್ಲಿದ್ದಾರೆ. ಮನೆಯಂಗಳದಲ್ಲಿ ಹೂರಂಗೋಲಿ ಸಿದ್ಧಪಡಿಸಲು ಹೂ, ಓಣಂ ಔತಣಕ್ಕಾಗಿ ಸಾಮಗ್ರಿಗಳು, ಹೊಸ ಬಟ್ಟೆಬರೆಗಳ ಖರೀದಿಗಾಗಿ ಜನರು ಈಗಾಗಲೇ ಆರಂಭಿಸಿದ್ದು, ಇಂದು ಅದು ಪಾರಮ್ಯಕ್ಕೇರಲಿದೆ. ಈಗಾಗಲೇ ಪೇಟೆಗಳಲ್ಲಿ
You cannot copy contents of this page