ಬಿಜೆಪಿ ಬದಿಯಡ್ಕ ಮಂಡಲ ಕಾರ್ಯಕರ್ತರ ಶಿಬಿರ

ಬದಿಯಡ್ಕ: ಬಿಜೆಪಿ ಬದಿಯಡ್ಕ ಮಂಡಲ ಕಾರ್ಯಕರ್ತರ ಶಿಬಿರ ಮಾರ್ಪನಡ್ಕದಲ್ಲಿ ಜರಗಿದ್ದು, ಬೆಳ್ತಂಗಡಿ ಶಾಸಕ ಹಾಗೂ ಕಾಸರಗೋಡು ವಿಧಾನಸಭಾ ಮಂಡಲ ಚುನಾವಣಾ ಪ್ರಭಾರಿ ಹರೀಶ್ ಪೂಂಜ ಉದ್ಘಾಟಿಸಿದರು. ಬಿಜೆಪಿ ಕೇರಳದಲ್ಲೂ ಅಧಿಕಾರಕ್ಕೇರಬೇಕಾದುದು ಕಾಲ ಘಟ್ಟದ ಅನಿವಾರ್ಯತೆ ಎಂದು, ಸ್ಥಳೀಯಾಡಳಿತ ಚುನಾವಣೆಯಲ್ಲಿ ಕೇರಳದಾದ್ಯಂತ ಗಳಿಸಿದ ಮುನ್ನಡೆ ವಿಧಾನಸಭಾ ಚುನಾವಣೆಯಲ್ಲೂ ಪ್ರತಿಫಲಿಸಲಿದೆ ಎಂದು ಅವರು ನುಡಿದರು.

ಮಂಡಲ ಅಧ್ಯಕ್ಷ ಕೆ. ಗೋಪಾಲಕೃಷ್ಣ ಅಧ್ಯಕ್ಷತೆ ವಹಿಸಿದರು. ಮುಖಂಡರಾದ ಕೆ. ಶ್ರೀಕಾಂತ್, ಸುಧಾಮ ಗೋಸಾಡ, ಎಂ.ಎಲ್. ಅಶ್ವಿನಿ, ಮಣಿಕಂಠ ರೈ, ಶ್ರೀಧರ ಬೆಳ್ಳೂರು, ರವೀಂದ್ರ ರೈ ಗೋಸಾಡ ಮಾತನಾಡಿದರು.

RELATED NEWS

You cannot copy contents of this page