ಕಾಸರಗೋಡು: ನಗರದಲ್ಲಿ ರಾತ್ರಿ ಕಾಲ ಆಟೋ ಚಾಲಕರಲ್ಲಿ ಕೆಲವರು ನೈತಿಕ ಪೊಲೀಸ್‌ಗಿರಿ ತೋರಿಸುತ್ತಿರುವು ದಾಗಿ ಬಿಎಂಎಸ್ ಆರೋಪಿಸಿದೆ. ರಾತ್ರಿ ಕಾಲದ ಗೂಂಡಾ ಪ್ರವೃತ್ತಿಯನ್ನು ಕೊನೆಗೊಳಿಸಬೇಕೆಂದು ಪೊಲೀಸರಲ್ಲಿ ಬಿಎಂಎಸ್ ಆಗ್ರಹಿಸಿದೆ. ಪೇಟೆಯಲ್ಲಿ ರಾತ್ರಿ ಕಾಲಗಳಲ್ಲಿ ಆಟೋ ನಿಲುಗಡೆ ಸ್ಥಳಗಳಲ್ಲಿ ನಿಲ್ಲಿಸುವ ಆಟೋ ರಿಕ್ಷಾಗಳ ಚಾಲಕರಲ್ಲಿ ಸ್ಟಾಂಡ್‌ನಿಂದ ಆಟೋ ವನ್ನು ತೆಗೆಯಬೇಕೆಂದು ಆಗ್ರಹಿಸುತ್ತಿ ರುವುದಾಗಿಯೂ, ತೆಗೆಯದಿದ್ದರೆ ಆಕ್ರಮಣ ನಡೆಸುವುದಾಗಿಯೂ ಬೆದರಿಕೆಯೊಡ್ಡುತ್ತಿರುವುದಾಗಿ ಬಿಎಂಎಸ್ ಸಭೆ ಆರೋಪಿಸಿದೆ.
ಫೆಬ್ರವರಿ ೨೫ರಂದು ರಾತ್ರಿ ಕೆಎಸ್‌ಆರ್‌ಟಿಸಿ ಕಿಂಗ್ ಕೋಬ್ರಾ ಆಟೋ ಸ್ಟಾಂಡ್‌ನಲ್ಲಿ ಸ್ಥಿರವಾಗಿ ನಿಲುಗಡೆ ಮಾಡುವ ಎರಡು ಆಟೋ ಚಾಲಕರನ್ನು ಇತರ ಮೂರು ಚಾಲಕರು ಬಂದು ಇಲ್ಲಿ ಪಾರ್ಕ್ ಮಾಡಬಾರ ದೆಂದು, ಗಾಡಿಯನ್ನು ಸ್ಥಳಾಂತರಗೊಳಿಸ ಬೇಕೆಂದು, ಇಲ್ಲದಿದ್ದರೆ ಆಟೋಗೆ ಹಾನಿಗೊಳಿಸುವುದಾಗಿಯೂ ಬೆದರಿಸಿ ದ್ದಾರೆಂದು, ಚಾಲಕರ ಸಮವಸ್ತ್ರವನ್ನು ಹರಿದು ಬಿಸಾಡಿರುವುದಾಗಿಯೂ ದೂರಲಾಗಿದೆ. ಇವರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳದಿದ್ದರೆ ಯೂನಿಯನ್ ತೀವ್ರ ಪ್ರತಿಭಟನೆಗೆ ಮುಂದಾಗಲಿದೆ ಎಂದು ಸಭೆ ಮುನ್ನೆಚ್ಚರಿಕೆ ನೀಡಿದೆ. ಎಸ್.ಕೆ. ಉಮೇಶ್ ಅಧ್ಯಕ್ಷತೆ ವಹಿಸಿದರು.
ಆಟೋರಿಕ್ಷಾ ಮಜ್ದೂರ್ ಸಂಘ ಬಿಎಂಎಸ್ ಜಿಲ್ಲಾ ಉಪಾಧ್ಯಕ್ಷ ಎ. ಕೇಶವ, ಬಿಎಂಎಸ್ ಜಿಲ್ಲಾ ಜೊತೆ ಕಾರ್ಯದರ್ಶಿ ಪಿ. ದಿನೇಶ್ ಬಂಬ್ರಾಣ, ವಲಯ ಕಾರ್ಯದರ್ಶಿ ಬಾಬು ಮೋನ್ ಚೆಂಗಳ, ಆಟೋರಿಕ್ಷಾ ಮಜ್ದೂರ್ ಸಂಘ್ ಜಿಲ್ಲಾ ಕೋಶಾಧಿಕಾರಿ ವಿಶ್ವನಾಥ ಶೆಟ್ಟಿ, ಪ್ರಸಾದ್ ವಳಪ್ಪೋತ್, ಮೋಹನ್‌ದಾಸ್ ಕೊರಕ್ಕೋಡು ಮಾತನಾಡಿದರು.







