ಅನಧಿಕೃತ ಮೀನುಗಾರಿಕೆ ಎರಡು ಬೋಟು ವಶ, ಐದು ಲಕ್ಷ ರೂ. ಜುಲ್ಮಾನೆ

ಕಾಸರಗೋಡು: ಕೇರಳದ ವ್ಯಾಪ್ತಿಗೆ ಒಳಪಟ್ಟ ಸಮುದ್ರ ಪ್ರದೇಶದಲ್ಲಿ ರಾತ್ರಿ ವೇಳೆ ಅನಧಿಕೃತವಾಗಿ ಮೀನುಗಾರಿ ಕೆಯಲ್ಲಿ ತೊಡಗಿದ್ದ ಕರ್ನಾಟಕದ ಎರಡು ಮೀನುಗಾರಿಕಾ  ದೋಣಿಗಳನ್ನು ರಾಜ್ಯ ಮೀನುಗಾರಿಕಾ ಇಲಾಖೆ, ಮರೈನ್ ಎನ್‌ಫೋರ್ಸ್‌ಮೆಂಟ್ ಮತ್ತು ಕರಾವಳಿ ಪೊಲೀಸರು ನಡೆಸಿದ ಸಂಯುಕ್ತ ಕಾರ್ಯಾಚರಣೆಯಲ್ಲಿ ಪತ್ತೆಹಚ್ಚಿ ವಶಕ್ಕೆ ತೆಗೆದುಕೊಂಡಿದೆ.

ವಶಪಡಿಸಲಾದ ಈ ಎರಡು ಬೋಟ್‌ಗಳಿಗೆ ಕಾನೂನು ಪ್ರಕಾರವಾದ ದಾಖಲು ಪತ್ರಗಳಾಗಲೀ, ಸಮುದ್ರದಡ ಪ್ರದೇಶದಲ್ಲಿ ಮೀನುಗಾರಿಕೆ ನಡೆಸುವ ಅಗತ್ಯದ ದಾಖಲು ಪತ್ರಗಳಾಗಲಿ ಹೊಂದಿರಲಿಲ್ಲ. ಆದ್ದರಿಂದ ಕೇರಳ ಸಮುದ್ರ ಮೀನು ಗಾರಿಕಾ ನಿಯಂತ್ರಣ ಕಾನೂನು ಪ್ರಕಾರ ಈ ಎರಡು ಬೋಟುಗಳನ್ನು ವಶಪಡಿಸ ಲಾಗಿದೆ. ಬಳಿಕ ಅವುಗಳಿಗೆ ಐದು ಲಕ್ಷ ರೂ. ಜುಲ್ಮಾನೆ ವಿಧಿಸಲಾಗಿದೆ. ಫಿಶರೀಸ್ ಎಕ್ಸ್‌ಟೆನ್ಶನ್ ಆಫೀಸರ್ ಅರುಣೇಂದು ರಾಮಕೃಷ್ಣನ್‌ರ ನೇತೃತ್ವದ ತಂಡ ಈ ಕಾರ್ಯಾಚರಣೆ ನಡೆಸಿದೆ.

Leave a Reply

Your email address will not be published. Required fields are marked *

You cannot copy content of this page