ಶಾಲಾ ಮಕ್ಕಳ ಗೋಡೆ ಹಾರಾಟ ಅಪಾಯಕ್ಕೆ ಸಾಧ್ಯತೆ: ಕುಂಬಳೆ ಮಾವಿನಕಟ್ಟೆಯಲ್ಲಿ ಕಾಲ್ನಡೆ ಮೇಲ್ಸೇತುವೆ ಬೇಕೆಂಬ ಬೇಡಿಕೆ

ಕುಂಬಳೆ: ವಿವಿಧ ಕಡೆಗಳಲ್ಲಿ ಫೂಟ್‌ಓವರ್ ಬ್ರಿಡ್ಜ್‌ಗಳಿಗೆ ಬೇಡಿಕೆ ಹೆಚ್ಚುತ್ತಿರುವಾಗ, ಅನುಮತಿ ನೀಡುತ್ತಿರುವಾಗ ಮಾವಿನಕಟ್ಟೆಯನ್ನು ಅವಗಣಿ ಸುತ್ತಿರುವುದಾಗಿ ಸ್ಥಳೀಯರು ಸೂಚಿಸಿದ್ದಾರೆ. ಇತ್ತೀಚೆಗೆ ಜಿಲ್ಲೆಯ ತಲಪಾಡಿ- ಚೆಂಗಳ ರೀಚ್‌ನಲ್ಲಿ 10ರಷ್ಟು ಸ್ಥಳಗಳಲ್ಲಿ ಹೊಸತಾಗಿ ಮೇಲ್ಸೇತುವೆ ಮಂಜೂರುಗೊಳಿಸಿ ಸೂಚನೆ ಲಭಿಸಿತ್ತು. ಕುಂಬಳೆ ಮಾವಿನಕಟ್ಟೆಯಲ್ಲಿ ಮಸೀದಿ, ಸಮೀಪದಲ್ಲೇ ಶಿಕ್ಷಣ ಸಂಸ್ಥೆಗಳು ಎಲ್ಲ ಇರುವಾಗ ಇಲ್ಲಿ ಅಂಡರ್ ಪಾಸ್ ಅನಿವಾರ್ಯವಾಗಿತ್ತು. ಇಲ್ಲಿ ಅಂಡರ್‌ಪಾಸ್‌ಗೆ ಸಮಾನ ವಾದ ರೀತಿಯಲ್ಲಿ ಕಲ್ವರ್ಟ್ ನಿರ್ಮಿಸುವಾಗ ಅದು ಕಾಲ್ನಡೆ ಪ್ರಯಾಣಿಕರಿಗೆ ಪ್ರಯೋಜನವಾ ಗುವ ರೀತಿಯಲ್ಲಿ ನಿರ್ಮಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದರು. ಆದರೆ ಸ್ಥಳೀಯರ ಈ ನಿರ್ದೇಶ, ಇಲ್ಲಿ ಫೂಟ್ ಓವರ್‌ಬ್ರಿಡ್ಜ್ ಬೇಕೆಂಬ ಬೇಡಿಕೆಯನ್ನು ಸಂಬಂಧಪಟ್ಟವರು ಅವಗಣಿಸಿದರೆಂದು ಸ್ಥಳೀಯರು ದೂರಿದ್ದಾರೆ. ಇಲ್ಲಿ ರಸ್ತೆ ದಾಟಬೇಕಿದ್ದರೆ ಕಿಲೋ ಮೀಟರ್‌ಗಳಷ್ಟು ದೂರದಲ್ಲಿರುವ ಕುಂಬಳೆ ರೈಲು ನಿಲ್ದಾಣದ ಅಂಡರ್‌ಪಾಸ್ ಆಶ್ರಯಿಸಬೇಕಾಗಿ ಬರುತ್ತಿದೆ. ಇದರಿಂದಾಗಿ ವಿದ್ಯಾರ್ಥಿ ಗಳು ಗೋಡೆ ಹಾರುತ್ತಿದ್ದು, ಇದು ಆತಂಕಕ್ಕೆ ಕಾರಣವಾಗಿದೆ. ಅಲ್ಲದೆ ಸಂಚಾರ ಸಮಸ್ಯೆಗೆ ಕಾರಣ ವಾಗುತ್ತಿದೆ. ಬಸ್‌ಗಳು ಸರ್ವೀಸ್ ರಸ್ತೆಯಲ್ಲಿ ಏಕಮುಖ ಸಂಚಾರ ನಡೆಸುತ್ತಿರುವುದು ಕೂಡಾ ಸಂಚಾರ ಸಮಸ್ಯೆಗೆ ಕಾರಣ ವಾಗುತ್ತಿದೆ. ಈ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿರುವ ಸ್ಥಳಗಳಲ್ಲೆಲ್ಲಾ ಕಾಲ್ನಡೆ ಮೇಲ್ಸೇತುವೆ ಸ್ಥಾಪಿಸಲಾಗುವು ದೆಂದು ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ಈ ಮೊದಲೇ ತಿಳಿಸಿದ್ದರು.  ಸ್ಥಳೀಯರ ಬೇಡಿಕೆಗೆ ಮಣಿದು ಇಲ್ಲಿ ಮೇಲ್ಸೇತುವೆ ಮಂಜೂರುಗೊಳಿಸಲಾಗಿದೆಯೆಂದು ಶಾಸಕ, ಸಂಸದರು ತಿಳಿಸಿದ್ದಾರೆ.

RELATED NEWS

You cannot copy contents of this page