ಅಪ್ರಾಪ್ತರ ವಾಹನ ಚಾಲನೆ ವ್ಯಾಪಕ ಮಂಜೇಶ್ವರ ಪೊಲೀಸರಿಂದ ವಾಹನ ತಪಾಸಣೆ ಬಿಗಿ

ಮಂಜೇಶ್ವರ: ಅಪ್ರಾಪ್ತರು ವಾಹನ ಚಲಾಯಿಸಿ ಅಪಘಾತಕ್ಕೆ ಕಾರಣವಾಗುತ್ತಿರುವ ಹಿನ್ನೆಲೆಯಲ್ಲಿ ಅದನ್ನು ತಡೆಯಲು ಮಂಜೇಶ್ವರ ಠಾಣೆಯ ಇನ್ಸ್ಫೆಕ್ಟರ್ ಕೆ.ರಾಜೀವ್ ಕುಮಾರ್ ನೇತೃತ್ವದಲ್ಲಿ ಮಂಜೇಶ್ವರ ಠಾಣಾ ವ್ಯಾಪ್ತಿಯಲ್ಲಿ ವಾಹನ ತಪಾಸಣೆ ಬಿಗುಗೊಳಿಸಿದ್ದಾರೆ. ಕಳೆದ ಒಂದು ತಿಂಗಳಲ್ಲಿ ಸುಮಾರು 20ಕ್ಕಿಂತ ಅಧಿಕ ಪ್ರಕರಣ ದಾಖಲಾಗಿದ್ದು, ಇದರಲ್ಲಿ ಹೆಚು ದ್ವಿಚಕ್ರ ವಾಹನವಾಗಿದೆ. ನಿನ್ನೆ ಕೂಡಾ ವರ್ಕಾಡಿ ಬೇಕರಿ ಜಂಕ್ಷನ್ ನಿಂದ 17ರ ಬಾಲಕ ಚಲಾಯಿಸುತ್ತಿದ್ದ ಸ್ಕೂಟರ್‌ನ್ನು ಎಸ್.ಐ ರಮೇಶ್ ವಶಪಡಿಸಿ ಆರ್.ಸಿ ಮಾಲಕ ಸವಾರನ ತಂದೆ ವಿರುದ್ದ ಕೇಸು ದಾಖಲಿಸಿದ್ದಾರೆ. ಈ ರೀತಿ ಕೇಸು ದಾಖಲಾದರೆ ಸುಮಾರು 20ಸಾವಿರಕ್ಕಿಂತ ಅಧಿಕ ಮೊತ್ತ ದಂಡವಾಗಿ ಪಾವತಿಸಬೇಕಾಗಿದೆ.

You cannot copy contents of this page