ಕೋಡಿಬೈಲು: ರಸ್ತೆ ಹದಗೆಟ್ಟು ಸಂಚಾರಕ್ಕೆ ಸಮಸ್ಯೆ

ಉಪ್ಪಳ: ಮಂಗಲ್ಪಾಡಿ ಪಂಚಾಯತ್ ವ್ಯಾಪ್ತಿಯ ಕೋಡಿಬೈಲುನಲ್ಲಿ ಎರಡು ರಸ್ತೆಗಳು ಹದಗೆಟ್ಟು ವಾಹನ ಸಂಚಾರಕ್ಕೆ ಸಮಸ್ಯೆಯಾಗಿ ಪರಿಣಮಿಸಿರುವುದಾಗಿ ಸಾರ್ವಜನಿಕರು ದೂರಿದ್ದಾರೆ. ಮಣ್ಣಂಗುಳಿಯಿಂದ ಕೋಡಿಬೈಲು ಹಾಗೂ ಉಪ್ಪಳ ಪತ್ವಾಡಿ ರಸ್ತೆಯಿಂದ ಕೋಡಿಬೈಲು ಪ್ರದೇಶಕ್ಕೆ ಸೇರುವ ರಸ್ತೆಗಳು ಶೋಚನೀಯಗೊಂಡಿದೆ. ಈ ಪ್ರದೇಶದಲ್ಲಿ ಶಾಲೆ, ನೂರಾರು ಮನೆಗಳಿದ್ದು, ನೂರಾರು ವಾಹನಗಳು ದಿನನಿತ್ಯ ಸಂಚರಿಸುತ್ತಿವೆ. ರಸ್ತೆಯ ಅಲ್ಲಲ್ಲಿ ಡಾಮಾರೀಕರಣ, ಕಾಂಕ್ರೀಟ್, ಇಂಟರ್‌ಲಾಕ್ ಇದ್ದು ಇವುಗಳೆಲ್ಲ ಹೊಂಡ ಗುಂಡಿಗಳಿAದ ಕೂಡಿ ಸಂಚಾರ ದುಸ್ತರವಾಗಿದೆ. ಸಂಬAಧ ಪಟ್ಟ ಅಧಿಕಾರಿಗಳು ಹದಗೆಟ್ಟ ರಸ್ತೆಗಳನ್ನು ದುರಸ್ತಿಗೊಳಿಸಿ ಸುಗಮ ಸಂಚಾರಕ್ಕೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

RELATED NEWS

You cannot copy contents of this page