ಅಯೋಧ್ಯೆಯ ಮಂತ್ರಾಕ್ಷತೆ ಮಂಗಲ್ಪಾಡಿಯಲ್ಲಿ ವಿತರಣೆ

ಉಪ್ಪಳ: ಅಯೋಧ್ಯ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮ ದ ಅಂಗವಾಗಿ ಮಂಗಲ್ಪಾಡಿ ಪಂಚಾಯತ್‌ನ 23 ಗ್ರಾಮಗಳಿಗೆ ಪವಿತ್ರ ಮಂತ್ರಾಕ್ಷತೆ ವಿತರಣಾ ಕಾರ್ಯಕ್ರಮ ಮುಳಿಂಜ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಿನ್ನೆ ಸಂಜೆ ನಡೆಯಿತು.
ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ದ ಪ್ರಮುಖ ಜಿತ್ತೇಂದ್ರ ಪ್ರತಾಪನಗರ ಮಂತ್ರಾಕ್ಷತೆಯ ಬಗ್ಗೆ ವಿವರಣೆ ನೀಡೀದರು. ಮಹಾಲಿಂಗೇಶ್ವರ ಸೇವಾ ಸಮಿತಿಯ ಮಾಜಿ ಅಧ್ಯಕ್ಷ ತಿಮ್ಮಪ್ಪ ಶೆಟ್ಟಿ ಪತ್ವಾಡಿ, ಮಹಾಲಿಂಗೇಶ್ವರ ಸೇವಾ ಸಮಿತಿ ಅಧ್ಯಕ್ಷರು, ಹಾಗೂ ವಿಶ್ವ ಹಿಂದೂ ಪರಿಷತ್ ಮಂಗಲ್ಪಾಡಿ ಖಂಡ ಸಮಿತಿ ಅಧ್ಯಕ್ಷ ಹರಿನಾಥ ಭಂಡಾರಿ ಮುಳಿಂಜ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು. ಮಂತ್ರಾಕ್ಷತೆಗೆ ಅರ್ಚಕರು ಆರತಿ ಬೆಳಗಿದ ಬಳಿಕ ಎಲ್ಲಾ ಗ್ರಾಮಗಳಿಗೆ ವಿತರಿಸಲಾಯಿತು. ರಘು.ಸಿ ಚೆರುಗೋಳಿ ಸ್ವಾಗತಿಸಿ, ಶ್ರೀಧರ ಶೆಟ್ಟಿ ಪರಂಕಿಲ ವಂದಿಸಿದರು.

You cannot copy contents of this page