ಆದಾಯಕ್ಕೂ ಹೆಚ್ಚಾದ ನಗದು ಪತ್ತೆ: ಮೋಟಾರು ವಾಹನ ಇಲಾಖೆ ಅಧಿಕಾರಿಯ ಮನೆಗೆ ದಾಳಿ

ಪಾಲಕ್ಕಾಡು: ಆದಾಯಕ್ಕೂ ಹೆಚ್ಚು ಸೊತ್ತು ಸಂಪಾದಿಸಿದ ಆರೋಪದಲ್ಲಿ ಸಿನಿಮಾ ನಟ, ಮೋಟಾರು ವಾಹನ ಇಲಾಖೆ ಅಧಿಕಾರಿಯಾದ ಕೆ. ಮಣಿಕಂಠನ್‌ರ ಮನೆ ಹಾಗೂ ಕಚೇರಿಗೆ ವಿಜಿಲೆನ್ಸ್ ತಪಾಸಣೆ ನಡೆಸಿದೆ. ಒಟ್ಟಪ್ಪಾಲದ ಬಾಡಿಗೆ ಮನೆಯಲ್ಲೂ, ಸಬ್ ರೀಜ್ಯನಲ್ ಟ್ರಾನ್ಸ್‌ಪೋರ್ಟ್ ಕಚೇರಿಯಲ್ಲೂ ಗಂಟೆಗಳ ಕಾಲ  ನಡೆಸಿದ ತಪಾಸಣೆಯಲ್ಲಿ  ಲೆಕ್ಕಕ್ಕಿಂತಲೂ ಅಧಿಕವೆಂದು  ತಿಳಿದುಕೊಂಡ ೧.೯೦ ಲಕ್ಷ ರೂ.ವನ್ನು  ವಶಪಡಿಸಿರುವುದಾಗಿ ವಿಜಿಲೆನ್ಸ್ ಪಿಆರ್‌ಒ ತಿಳಿಸಿದ್ದಾರೆ. ಕಲ್ಲಿಕೋಟೆ ವಿಜಿಲೆನ್ಸ್ ಸ್ಪೆಷಲ್ ಸೆಲ್ ಎಫ್‌ಐಆರ್ ನೋಂದಾಯಿಸಿದ ಬೆನ್ನಲ್ಲೇ ಏಕ ಕಾಲದಲ್ಲೇ ಮೂರು ಕಡೆಯೂ ತಪಾಸಣೆ ನಡೆಸಲಾಗಿದೆ. ಕಾಸರಗೋಡು  ಚೆರ್ವತ್ತೂರು ಕೊವ್ವಲ್ ನಿವಾಸಿ ಯಾದ ಕೆ. ಮಣಿಕಂಠನ್ ಒಟ್ಟಪ್ಪಾಲ ಸಬ್ ರೀಜ್ಯನಲ್ ಟ್ರಾನ್ಸ್‌ಪೋರ್ಟ್ ಕಚೇರಿಯ ಅಸಿಸ್ಟೆಂಟ್ ಮೋಟರ್ ವೆಹಿಕಲ್ ಇನ್‌ಸ್ಪೆಕ್ಟರ್ ಆಗಿದ್ದು ತೋಟ್ಟಾಕ್ಕರದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ.

You cannot copy contents of this page