ಆರಿಕ್ಕಾಡಿ ಜನರಲ್ ಜಿಬಿಎಲ್‌ಪಿ ಶಾಲೆ ಹೊಸ ಕಟ್ಟಡ ಉದ್ಘಾಟನೆ ೧೭ರಂದು

ಕುಂಬಳೆ: ಆರಿಕ್ಕಾಡಿ ಜನರಲ್ ಜಿಬಿಎಲ್‌ಪಿ ಶಾಲೆಯ ಹೊಸ ಕಟ್ಟಡ ವನ್ನು ಶಿಕ್ಷಣ ಸಚಿವ ವಿ. ಶಿವನ್‌ಕುಟ್ಟಿ ಆನ್‌ಲೈನ್ ಮೂಲಕ ಶನಿವಾರ ಉದ್ಘಾಟಿಸುವರು. ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್‌ನಿಂದ ಮಂಜೂ ರಾದ ಒಂದು ಕೋಟಿ ರೂ. ವೆಚ್ಚ ಮಾಡಿ ಕಟ್ಟಡ ನಿರ್ಮಿಸಲಾಗಿದೆ. ಇದೇ ವೇಳೆ ಶಾಲೆಯ ೬೯ನೇ ವಾರ್ಷಿಕೋ ತ್ಸವ ನಡೆಯಲಿದೆ. ಅಂದು ಬೆಳಿಗ್ಗೆ ೧೧ ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ಶಾಸಕ ಎ.ಕೆ.ಎಂ. ಅಶ್ರಫ್ ಅಧ್ಯಕ್ಷತೆ ವಹಿಸುವರು. ಉದ್ಘಾಟನೆಯಂಗವಾಗಿ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳ ಲಾಗಿದೆ. ಕಾರ್ಯಕ್ರಮದಲ್ಲಿ ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್, ಜಿಲ್ಲಾಧಿಕಾರಿ ಕೆ. ಇಂಬಶೇಖರ್ ಸಹಿತ ಹಲವು ಗಣ್ಯರು ಭಾಗವಹಿಸುವರು. ಈ ಬಗ್ಗೆ ನಡೆಸಿದ ಸುದ್ಧಿಗೋಷ್ಠಿಯಲ್ಲಿ ಪಿಟಿಎ ಅಧ್ಯಕ್ಷ ಬಿ.ಎ. ರಹ್‌ಮಾನ್ ಆರಿಕ್ಕಾಡಿ, ಮುಖ್ಯೋಪಾಧ್ಯಾಯಿನಿ ಲೀಲಾ ಟೀಚರ್, ಕೆ.ಎಂ. ಅಬ್ಬಾಸ್, ಕೃಷ್ಣಕುಮಾರ್ ಪಳ್ಳಿಯತ್, ಡಾ. ಜಲಾಲುಲ್ ಹಖ್ ಭಾಗವಹಿಸಿದರು.

You cannot copy contents of this page