ಇನ್ಫೋಪಾರ್ಕ್ ಕಂಪೆನಿಗೆ 1 ಕೋಟಿ ರೂ. ವಂಚನೆ: ಬಂಗಾಳದಲ್ಲಿ ಅಧ್ಯಾಪಿಕೆ ಸೆರೆ

ಕೊಚ್ಚಿ: 1 ಕೋಟಿ ರೂ.ಗಳ ಆನ್‌ಲೈನ್ ವಂಚನೆ ನಡೆಸಿದ ಅಧ್ಯಾಪಿಕೆ ಸೆರೆಯಾಗಿದ್ದಾಳೆ. ಪಶ್ಚಿಮಬಂಗಾಳ ನಿವಾಸಿಯಾದ ಸುಪತಾಮಿಶ್ರಾ ಚಟರ್ಜಿ (54) ಸೆರೆಯಾದ ಅಧ್ಯಾಪಿಕೆ. ಇನ್ಫೋ ಪಾರ್ಕ್ ಪೊಲೀಸರು ಈಕೆಯನ್ನು ಬಂಧಿಸಿದ್ದಾರೆ. ಇನ್ಫೋ ಪಾರ್ಕ್‌ನ ಕೇರ ಫೈಬರ್ ಟೆಕ್ಸ್ ಕಂಪೆನಿ ಯಿಂದ ೧.೦೫ ಕೋಟಿ ರೂ. ವಂಚಿಸಲಾಗಿತ್ತು. ಸುಪತಾಳ ಬ್ಯಾಂಕ್ ಖಾತೆಯನ್ನು ಈ ವಂಚನೆ ಗಾಗಿ ಉಪಯೋಗಿಸಲಾಗಿತ್ತು.

ಇನ್ಫೋ ಪಾರ್ಕ್ ಪೊಲೀಸರು ಬಂಗಾಳಕ್ಕೆ ತಲುಪಿ ಮನೆಯನ್ನು ಸುತ್ತುವರಿದು ಆರೋಪಿಯನ್ನು ಸೆರೆ ಹಿಡಿದಿದ್ದಾರೆ. ಬಾಲಿವುಡ್‌ನ ಖ್ಯಾತ ಗಾಯಕನೆಂದು ಪರಿಚಯಿಸಿ ಸಾಮಾಜಿಕ ಜಾಲತಾಣಗಳ ಮೂಲಕ ಸುಪತಾ ಮಿಶ್ರಾಳೊಂದಿಗೆ ಗೆಳೆತನ ಹೊಂದಿದ ವ್ಯಕ್ತಿ ವಂಚನಾ ತಂಡದ ಮುಖ್ಯಸ್ಥನೆಂದು ಶಂಕಿಸಲಾಗುತ್ತಿದೆ. ಈಕೆಯ ಖಾತೆ ಮೂಲಕ ಸಂಗ್ರಹಿಸಿದ ಹಣದ ಬಹುಪಾಲನ್ನು ಇತರ ಆರೋಪಿಗಳು ಕಸಿದು ಕೊಂಡಿದ್ದಾರೆನ್ನಲಾಗಿದೆ. ಇವರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.

ನಕಲಿ ಇ-ಮೇಲ್ ಸಂದೇಶಗಳನ್ನು ಕಳುಹಿಸಿ ಕಂಪೆನಿಗೆ ವಂಚನೆ ನಡೆಸಲಾಗಿದೆ. ಬಂಗಾಳದ ಜಲ್ಡಾ ಗ್ರಾಮದಲ್ಲಿರುವ ಸರಕಾರಿ ಇಂಗ್ಲಿಷ್ ಮಾಧ್ಯಮ ಶಾಲೆಯ ಅಧ್ಯಾಪಿಕೆಯಾಗಿದ್ದಾಳೆ ಸುಪತಾ.

RELATED NEWS

You cannot copy contents of this page