ಕಾಸರಗೋಡು: ಕಾಸರಗೋಡು ಲೋಕಸಭಾ ಕ್ಷೇತ್ರದಲ್ಲಿ ಎನ್‌ಡಿಎ ಉಮೇದ್ವಾರರಾಗಿ ಸ್ಪರ್ಧಿಸುತ್ತಿರುವ ಎಂ.ಎಲ್. ಅಶ್ವಿನಿಯವರ ಚುನಾವಣಾ ಪ್ರಣಾಳಿಕೆಯನ್ನು ನಾಳೆ ಕೇಂದ್ರ ಮಹಿಳಾ ಶಿಶು ಕಲ್ಯಾಣ ಖಾತೆ ಸಚಿವೆ ಸ್ಮೃತಿ ಇರಾನಿಯವರು ಪ್ರಕಾಶನಗೈಯ್ಯುವರು.
ನಾಳೆ ಸಂಜೆ ೪.೩೦ಕ್ಕೆ ಹೊಸದುರ್ಗದ ಕೋಟಚ್ಚೇರಿಯಲ್ಲಿ ನಡೆಯುವ ಎನ್‌ಡಿಎ ಚುನಾವಣಾ ಪ್ರಚಾರ ರ‍್ಯಾಲಿಯಲ್ಲಿ ಚುನಾವಣಾ ಪ್ರಣಾಳಿಕೆಯನ್ನು ಕೇಂದ್ರ ಸಚಿವರು ಪ್ರಕಾಶನಗೈದು ಮಾತನಾಡುವರು. ಈ ಕಾರ್ಯಕ್ರಮದಲ್ಲಿ ಎನ್‌ಡಿಎ ರಾಜ್ಯ ಮತ್ತು ಜಿಲ್ಲಾ ನೇತಾರರೂ ಭಾಗವಹಿಸುವರು.