ಐಎನ್‌ಟಿಯುಸಿ ಆಟೋರಿಕ್ಷಾ ಕಾರ್ಮಿಕರಿಂದ ಮೇ ದಿನಾಚರಣೆ

ಕಾಸರಗೋಡು: ಐಎನ್‌ಟಿಯುಸಿ ಮೋಟಾರ್ ಕಾರ್ಮಿಕರ ಯೂನಿಯನ್ ನೇತೃತ್ವದಲ್ಲಿ ಕಾಸರಗೋಡು ಪ್ರೆಸ್ ಕ್ಲಬ್ ಜಂಕ್ಷನ್‌ನಲ್ಲಿ ನಿನ್ನೆ ಆಟೋರಿಕ್ಷಾ ನೌಕರರು ಧ್ವಜಾರೋಹಣ ನಡೆಸಿ ಕಾರ್ಮಿಕರ ದಿನಾಚರಿಸಿದರು. ಸಂಘಟನೆಯ ರಾಜ್ಯ ಸಮಿತಿ ಸದಸ್ಯ ಆರ್. ವಿಜಯ ಕುಮಾರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅವರು ಮಾತನಾಡಿ, ನೌಕರರ ಹಕ್ಕುಗಳನ್ನು ಸಂರಕ್ಷಿಸಲು ಮೇ ದಿನದ ಸಂದೇಶವನ್ನು ಹೊಸ ತಲೆಮಾರಿಗೆ ತಲುಪಿಸಬೇಕು. ಅದಕ್ಕಾಗಿ ಎಲ್ಲರೂ ಒಗ್ಗಟ್ಟಿನಿಂದ ಮುಂದೆ ಬರಬೇಕೆಂದು ತಿಳಿಸಿದರು.

ಮೋಟಾರ್ ಕಾರ್ಮಿಕರ ಯೂನಿಯನ್ ಮಂಡಲ ಅಧ್ಯಕ್ಷ ಹರೀಶ್ಚಂದ್ರ ಇರಕ್ಕೋಡನ್ ಅಧ್ಯಕ್ಷತೆ ವಹಿಸಿದರು. ಕಾರ್ಮಿಕರಾದ ರಾಘವೇಂದ್ರ ಚೆರ್ಕಳ, ವಿ. ರಾಮಕೃಷ್ಣನ್ ಚೆಮ್ನಾಡ್ ಮೊದಲಾದವರು ಮಾತನಾಡಿದರು.

RELATED NEWS

You cannot copy contents of this page