ಕುಂಬಳೆ: ಒಳಯಂ ಮಖಾಂ ಮಸೀದಿ ಪರಿಸರದಲ್ಲಿ ವಲಿಯುಲ್ಲಾಹಿ ಅವರ ಹೆಸರಲ್ಲಿ ನಡೆಸುವ ಉದಯಾಸ್ತಮಾನ ಉರೂಸ್ ಇಂದಿನಿಂದ ಮೇ 10ರ ವರೆಗೆ ನಡೆಯಲಿದೆಯೆಂದು ಉರೂಸ್ ಸಮಿತಿ ಪದಾಧಿಕಾರಿಗಳು ಕುಂಬಳೆಯಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಇಂದು ಬೆಳಿಗ್ಗೆ ಕುಂಞಿಕೋಯ ತಂಙಳ್ ಒಳಯಂ ಮಖಾಂ ಸಿಯಾರತ್‌ಗೆ ನೇತೃತ್ವ ವಹಿಸಿದರು. ಇಸ್ಮಾಯಿಲ್ ಹಾಜಿ ಧ್ವಜಾರೋಹಣಗೈದರು. ಹಾಜಿ ಪಕ್ರುದ್ದೀನ್ ಕುನ್ನಿಲ್ ಕಾರ್ಯಾಲಯ ಉದ್ಘಾಟಿಸಿದರು. ರಾತ್ರಿ ಹಾಫಿಸ್ ಮಹಮ್ಮದ್ ತಂಙಳ್ ಒಳಯಂ ಪಾರಾಯಣಕ್ಕೆ ನೇತೃತ್ವ ನೀಡಿದರು. ಅತಾವುಲ್ಲ ತಂಙಳ್ ಉದ್ಯಾವರ ಅಧ್ಯಕ್ಷತೆ ವಹಿಸಿದರು. ಖತೀಬ್ ಹಸ್ಸನ್ ದಾರಿಮಿ ಉಪಸ್ಥಿತರಿರುವರು. ಮುನವ್ವರಲಿ ಶಿಹಾಬ್ ತಂಙಳ್ ಪಾಣಕ್ಕಾಡ್ ಉದ್ಘಾಟಿಸುವರು. ಶಾಸಕ ಎಕೆಎಂ ಅಶ್ರಫ್ ಸಹಿತ ಹಲವರು ಭಾಗವಹಿಸುವರು.
ನಾಳೆ ರಾತ್ರಿ ರಹ್ಮತುಲ್ಲ ಸಖಾಫಿ ಎಳಮರಂ, ೨೬ರಂದು ಸುಫಿಯಾನ್ ಬಾಖವಿ ಧಾರ್ಮಿಕ ಪ್ರವಚನ ನೀಡುವರು. ಮುಂದಿನ ದಿನಗಳಲ್ಲಿ ವಿವಿಧ ವಿಷಯಗಳ ಬಗ್ಗೆ ಪಂಡಿತರು ಧಾರ್ಮಿಕ ಉಪನ್ಯಾಸ ನೀಡುವರು. ಮೇ 10ರಂದು ಸಮಾರೋಪ ಸಮಾರಂಭ ನಡೆಯಲಿದ್ದು, ಕುಂಞಿಕೋಯ ತಂಙಳ್ ಪ್ರಾರ್ಥನೆ ನಿರ್ವಹಿಸುವರು. ಅಬ್ದುಲ್ ರಹ್ಮಾನ್ ನಿಜಮಿ ಶಿರಿಯ ಉಪಸ್ಥಿತರಿರುವರು. ಕೆ.ಎಸ್. ಜಾಫರ್ ಸ್ವಾದಿಕ್ ತಂಙಳ್ ಕುಂಬೋಳ್ ಉದ್ಘಾಟಿಸುವರು. ಸಿರಾಜುದ್ದೀನ್ ಅಲ್ ಖಾಸಿಮಿ ಪ್ರಧಾನ ಭಾಷಣ ಮಾಡುವರು. ಈ ಬಗ್ಗೆ ನಡೆಸಿದ ಸುದ್ಧಿಗೋಷ್ಠಿಯಲ್ಲಿ ಮೊಹಮ್ಮದ್ ಹಸನ್ ದಾರಿಮಿ, ಅಬ್ದುಲ್ ಸಮದ್ ಕಜೆ, ಅಶ್ರಫ್ ಒ. ಎಂ, ಮೊಹಮ್ಮದ್ ಹಾಜಿ ಕೋಟೆ, ಅಬ್ದುಲ್ ರಜಾಕ್ ವಾನಂದೆ, ಯೂಸಫ್ ಉಪಸ್ಥಿತರಿದ್ದರು.